ETV Bharat / jagte-raho

ಗಾಂಜಾ ಕಳ್ಳಸಾಗಣೆ: ಗುಂಡಿನ ದಾಳಿ ನಡೆಸಿ ಏಳು ಜನರ ಬಂಧನ - ಕುಖ್ಯಾತ ಗಾಂಜಾ ಪೆಡ್ಲರ್ ಅನೂಪ್ ಜೈಸ್ವಾಲ್

ಕುಖ್ಯಾತ ಗಾಂಜಾ ಪೆಡ್ಲರ್ ಅನೂಪ್ ಜೈಸ್ವಾಲ್ ಮತ್ತು ಆತನ ಆರು ಸಹಚರರನ್ನು ಬಂಧಿಸಿರುವ ಮಧ್ಯಪ್ರದೇಶ ಪೊಲೀಸರು, ಆರೋಪಿಗಳಿಂದ 2.12 ಕೋಟಿ ರೂ. ನಗದು, 4 ವಾಹನಗಳು, 9.5 ಲಕ್ಷ ಮೌಲ್ಯದ 94 ಕೆಜಿ ಗಾಂಜಾ ಮತ್ತು 2.77 ಕೋಟಿ ರೂ. ಮೌಲ್ಯದ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

ganja
ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಏಳು ಜನರ ಬಂಧನ
author img

By

Published : Jul 27, 2020, 5:11 PM IST

ಮಧ್ಯಪ್ರದೇಶ: ಇಲ್ಲಿನ ಸತ್ನಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿ ಬಳಿಕ ಕುಖ್ಯಾತ ಗಾಂಜಾ ಪೆಡ್ಲರ್ ಅನೂಪ್ ಜೈಸ್ವಾಲ್ ಮತ್ತು ಆತನ ಆರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಭೋಪಾಲ್​ನಿಂದ ಸತ್ನಾಗೆ ಹಿಂದಿರುಗುತ್ತಿದ್ದರು. ನಿಖರ ಮಾಹಿತಿ ಮೇರೆಗೆ ಗುಂಡಿನ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.12 ಕೋಟಿ ರೂ. ನಗದು, 4 ವಾಹನಗಳು, 9.5 ಲಕ್ಷ ಮೌಲ್ಯದ 94 ಕೆಜಿ ಗಾಂಜಾ ಮತ್ತು 2.77 ಕೋಟಿ ರೂ. ಮೌಲ್ಯದ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ ಎಂದು ಇನ್ಸ್​​ಪೆಕ್ಟರ್​ ಜನರಲ್ ಚಂಚಲ್ ಶೇಖರ್ ತಿಳಿಸಿದರು.

ಭಾರತೀಯ ಮಾದಕ ವಸ್ತು ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 332ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅನೂಪ್ ಜೈಸ್ವಾಲ್ ವಿರುದ್ಧ ವಿವಿಧ ಠಾಣೆಗಳಲ್ಲಿ 40 ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.