ETV Bharat / jagte-raho

ಸಿಎಂ ಕಾವೇರಿ ನಿವಾಸದ ಮುಂದೆ ಐಷಾರಾಮಿ ಜಾಗ್ವಾರ್ ಕಾರು ಅಪಘಾತ..

ಉದ್ಯಮಿ ಮದ್ಯ ಸೇವಿಸಿ ನಿನ್ನೆ ತಡರಾತ್ರಿ ಕಾರು ಚಲಾಯಿಸಿದ್ದು ಎನ್ನಲಾಗಿದ್ದು, ಈ ಸಂಬಂಧ ಮರಕ್ಕೆ ಗುದ್ದಿದ್ದ ಪರಿಣಾಮ ಕಾರಿನ ಎರಡು‌ ಚಕ್ರಗಳು ಪೀಸ್ ಪೀಸ್ ಆಗಿವೆ‌.‌ ಕಾರಿನ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ‌.‌.

CM Cauvery residence
ಐಷಾರಾಮಿ ಜಾಗ್ವಾರ್ ಕಾರು ಅಪಘಾತ
author img

By

Published : Jan 30, 2021, 8:54 PM IST

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ಐಷಾರಾಮಿ ಜಾಗ್ವಾರ್ ಕಾರು ಅಪಘಾತವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಐಷಾರಾಮಿ ಜಾಗ್ವಾರ್ ಕಾರು ಅಪಘಾತ

ಓದಿ: ಹೆಲಿಕಾಪ್ಟರ್​ನಲ್ಲಿ ಬರೋಕೆ ಪ್ಲ್ಯಾನ್ ಮಾಡಿದ್ದು ಈಗ ಸಮಸ್ಯೆಯಾಗಿದೆ: ಶಾಸಕ ಪ್ರಿತಂ ಗೌಡ

ಕುಡಿದ‌ ನಶೆಯಲ್ಲಿ ಉದ್ಯಮಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉದ್ಯಮಿ ಮದ್ಯ ಸೇವಿಸಿ ನಿನ್ನೆ ತಡರಾತ್ರಿ ಕಾರು ಚಲಾಯಿಸಿದ್ದು ಎನ್ನಲಾಗಿದ್ದು, ಈ ಸಂಬಂಧ ಮರಕ್ಕೆ ಗುದ್ದಿದ್ದ ಪರಿಣಾಮ ಕಾರಿನ ಎರಡು‌ ಚಕ್ರಗಳು ಪೀಸ್ ಪೀಸ್ ಆಗಿವೆ‌.‌ ಕಾರಿನ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ‌.‌

ಸ್ವಲ್ಪ‌ ಯಾಮಾರಿದ್ದರೂ ಸಿಎಂ‌ ನಿವಾಸದ ಮುಂದೆ ಕರ್ತವ್ಯ ಮಾಡುವ ಪೊಲೀಸರಿಗೂ ಅನಾಹುತವಾಗುವ ಸಂಭವವಿತ್ತು. ಸದ್ಯ ಕಾರು‌ ಚಲಾಯಿಸಿದ ಚಾಲಕನ ಹೆಸರು ವಿಳಾಸ ತಿಳಿದು ಬಂದಿಲ್ಲ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲನೆ‌ ನಡೆಸಿರುವ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.