ETV Bharat / jagte-raho

ದುರಸ್ತಿ ವೇಳೆ ವಿದ್ಯುತ್ ಹರಿದು ಕಂಬದಲ್ಲೇ ಲೈನ್​​ಮೆನ್​ ಸಾವು - electric shock

ವಿದ್ಯುತ್‌ ದುರಸ್ತಿ ವೇಳೆ ವಿದ್ಯುತ್​​ ಸ್ಪರ್ಶಿಸಿ ಲೈನ್​​ಮೆನ್ ಕಂಬದ ಮೇಲೆಯೇ ಮೃತಪಟ್ಟ ಘಟನೆ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ.

Lineman death due to electric shock in Gulbarga University
ವಿದ್ಯುತ್‌ ದುರಸ್ತಿ ವೇಳೆ ವಿದ್ಯುತ್​​ ಸ್ಪರ್ಶಿಸಿ ಲೈನ್​​ಮೆನ್ ಸಾವು
author img

By

Published : Mar 19, 2020, 1:22 PM IST

ಕಲಬುರಗಿ: ವಿದ್ಯುತ್‌ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಲೈನ್​ಮೆನ್​ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ.

ಇಬ್ರಾಹೀಂ (45) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಮಳೆಯಿಂದ ಕಳೆದ ರಾತ್ರಿ ವಿವಿ ಆವರಣದಲ್ಲಿ ವಿದ್ಯುತ್​​ ಸಂಪರ್ಕ ಸ್ಥಗಿತಗೊಂಡಿತ್ತು. ಇಂದು ಬೆಳಿಗ್ಗೆ ಸ್ಥಳಕ್ಕೆ ಬಂದ ಇಬ್ರಾಹಿಂ, ಮುಖ್ಯ​ ಲೈನ್​ ಬಂದ್​​ ಮಾಡಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದರು. ಕಂಬ ಹತ್ತಿದ ಸ್ವಲ್ಪ ಹೊತ್ತಿನಲ್ಲಿಯೇ ವಿದ್ಯುತ್​​​ ಸಂಚರಿಸಿ ಕಂಬದ ಮೇಲೆಯೇ ಇಬ್ರಾಹಿಂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Lineman death due to electric shock in Gulbarga University
ವಿದ್ಯುತ್‌ ದುರಸ್ತಿ ವೇಳೆ ವಿದ್ಯುತ್​​ ಸ್ಪರ್ಶಿಸಿ ಲೈನ್​​ಮೆನ್ ಸಾವು

ಮುಖ್ಯ​ ಲೈನ್​ ಬಂದ್​​ ಮಾಡಿದ ಬಳಿಕ ಮತ್ತೆ ಯಾರೋ ಫ್ಯೂಜ್​ ಹಾಕಿರೋ ಸಾಧ್ಯತೆ ಇದೆ. ಇದರಿಂದ ಕಂಬ ಹತ್ತಿದ ಸ್ವಲ್ಪ ಹೊತ್ತಿನಲ್ಲಿಯೇ ಇಬ್ರಾಹಿಂ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.