ETV Bharat / jagte-raho

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ.. ಸಿಸಿಬಿಯಿಂದ ಅಂಪೈರ್ ಬಿ ಕೆ ರವಿ ವಿಚಾರಣೆ

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಅಂಪೈರ್ ಬಿ ಕೆ ರವಿ ಅವರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಸಿಸಿಬಿಯಿಂದ ಅಂಪೈರ್ ಬಿ.ಕೆ. ರವಿ ವಿಚಾರಣೆ
author img

By

Published : Nov 22, 2019, 2:29 PM IST

ಬೆಂಗಳೂರು: ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಅಂಪೈರ್ ಬಿ ಕೆ ರವಿಯವರನ್ನು ವಿಚಾರಣೆ ನಡೆಸಿದ್ದಾರೆ. ಕೆಪಿಎಲ್​ ಪಂದ್ಯದಲ್ಲಿ ಬಿ ಕೆ ರವಿ ಅಂಪೈರ್ ಆಗಿದ್ದರು. ಅದೇ ಮ್ಯಾಚ್​ನಲ್ಲಿ ಅವರ ಮಗ ಶರತ್ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್​ಮನ್ ಆಗಿದ್ದರು. ರವಿಯವರು ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಂದೆ ವಿಚಾರಣೆ ಬೆನ್ನಲ್ಲೇ ಮಗನಿಗೂ ಸಹ ಸಿಸಿಬಿಯ ಭಯ ಉಂಟಾಗಿದ್ದು, ತಂದೆಯ ಹೇಳಿಕೆಯ ಮೇರೆಗೆ ಮಗನಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಕುಟುಂಬಸ್ಥರು ಆಡುವ ಪಂದ್ಯದಲ್ಲಿ ಅಂಪೈರಿಂಗ್ ಮಾಡುವಂತಿಲ್ಲ. ಆದರೆ, ಶರತ್ ಆಡಿದ ಮ್ಯಾಚ್​ನಲ್ಲಿ ಅವರ ತಂದೆಯೇ ಅಂಪೈರ್ ಆಗಿದ್ದರು. ಈ ಹಿನ್ನೆಲೆ ಮಗ ಆಡಿದ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್ ಆಗಿರುವ ಸುಳಿವು ಹಿನ್ನೆಲೆ ಪಂದ್ಯದ ಸಂಪೂರ್ಣ ಫೂಟೇಜ್‌ನ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್..

ಈ ಕುರಿತು ಮಾತನಾಡಿದ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಇತರೆ ಆಟಗಾರರು ಹಾಗೂ ಬುಕ್ಕಿಗಳು ನೀಡಿದ ಮಾಹಿತಿಯ ಮೇರೆಗೆ ರವಿಯವರನ್ನು ವಿಚಾರಣೆಗೊಳಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್
ಪ್ರತಿಷ್ಠಿತ ಅಂಪೈರ್ ಹಾಗೂ ಮಗ ಭಾಗಿಯಾಗಿರುವ ಗುಮಾನಿ
Byite ಪೋಟೊ ಕಳುಹಿಸಲಾಗಿದೆ

KPL ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಮೊದಲ ಬಾರಿಗೆ ಅಂಪೈರ್ ವಿಚಾರಣೆಯನ್ನ ನಿನ್ನೆ ಇಂದು ನಡೆಸಿದ್ದಾರೆ. ಅಂಪೈರ್ ಬಿ.ಕೆ.ರವಿ ವಿಚಾರಣೆಯನ್ನ ಸಿಸಿಬಿ ನಡೆಸಿ ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.
KPL ಮ್ಯಾಚ್ ನಲ್ಲಿ ಬಿ.ಕೆ.ರವಿ ಅಂಪೈರ್ ಆಗಿದ್ದರು. ಅದೇ ಮ್ಯಾಚ್ ನಲ್ಲಿ ಮಗ ಶರತ್ ವೀಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮ್ಯಾನ್ ಕೂಡ ಆಗಿದ್ದ.ಸದ್ಯ ತಂದೆ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಗುಮಾನಿ ಮೇರೆಗೆ ವಿಚಾರಣೆ ನಡೆಸಿದ್ದಾರೆ.

ತಂದೆ ವಿಚಾರಣೆ ಬೆನ್ನಲ್ಲೇ ಮಗನಿಗೂ ಸಿಸಿಬಿ ಭಯ ಉಂಟಾಗಿದೆ. ಯಾಕಂದ್ರೆ‌ ತಂದೆಯ ಹೇಳಿಕೆ ಮೇರೆಗೆ ಮಗನಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತ ಇದೆ. ನಿಯಮದ ಪ್ರಕಾರ ಕುಟುಂಬಸ್ಥರು ಆಡುವ ಪಂದ್ಯದಲ್ಲಿ ಸಂಬಂಧಪಟ್ಟ ಕುಟುಂಬಸ್ಥರು ಅಂಪೈರಿಂಗ್ ಮಾಡುವಂತಿಲ್ಲ.. ಆದರೆ ಶರತ್ ಆಡಿದ ಮ್ಯಾಚ್ ನಲ್ಲಿ ತಂದೆ ಅಂಪೈರ್ ಆಗಿದ್ದಾನೆ.ಈ ಹಿನ್ನೆಲೆ ಮಗ ಆಡಿದ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್ ಆಗಿರುವ ಸುಳಿವು ಹಿನ್ನೆಲೆ ರವಿ ಅಂಪರಿಂಗ್ ಮಾಡಿದ್ದ ಪಂದ್ಯದ ಸಂಪೂರ್ಣ ಪೂಟೇಜನ್ನ ಸಿಸಿಬಿ ಪರಿಶೀಲನೆ ನಡೆಸಿದ್ದಾರೆ

ಮತ್ತೊಂದೆಡೆ ಸಿಸಿವಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮಾಧ್ಯಮ ಜೊತೆ ಮಾತಾಡಿ ಇತರೆ ಆಟಗಾರರು, ಬುಕ್ಕಿಗಳು ನೀಡಿದ ಮಾಹಿತಿ ಮೇರೆಗೆ ಅಂಫೈರ್ ರವಿಯವರನ್ನ ವಿಚಾರಣೆಗೆ ಒಳಪಡಿಸಿದ್ದಿವಿ. ಒಂದು ವೇಳೆ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಾಗುವುದು ಎಂದರುBody:KN_BNG_05_KPL _CCB_7204498Conclusion:KN_BNG_05_KPL _CCB_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.