ETV Bharat / jagte-raho

ಐಸ್​ ಕ್ರೀಂನಲ್ಲಿ ವಿಷ ಬೆರೆಸಿ ನೀಡಿದ ಭೂಪ: ತಂಗಿ ಸಾವು, ಪೋಷಕರ ಸ್ಥಿತಿ ಗಂಭೀರ - ಕೇರಳ

ಕುಟುಂಬದ ಅಡಚಣೆಯಿಲ್ಲದೆ ತನ್ನಿಷ್ಟದಂತೆ ಒಬ್ಬಂಟಿಯಾಗಿ ಜೀವನ ನಡೆಸಲು ಯುವಕನೋರ್ವ ಐಸ್​ ಕ್ರೀಂನಲ್ಲಿ ವಿಷ ಬೆರೆಸಿ ತನ್ನ ಕುಟುಂಬಸ್ಥರಿಗೆ ನೀಡಿದ್ದಾನೆ.

Kerala man poisons own family
ಐಸ್​ ಕ್ರೀಂನಲ್ಲಿ ವಿಷ ಬೆರೆಸಿ ನೀಡಿದ ಭೂಪ
author img

By

Published : Aug 14, 2020, 3:40 PM IST

ಕಾಸರಗೋಡು: ಒಬ್ಬಂಟಿಯಾಗಿ ಬದುಕಲಿಚ್ಛಿಸಿದ ಯುವಕನೋರ್ವ ಐಸ್​ ಕ್ರೀಂನಲ್ಲಿ ವಿಷ ಬೆರೆಸಿ ತನ್ನ ಕುಟುಂಬಸ್ಥರಿಗೆ ನೀಡಿದ್ದಾನೆ. ಪರಿಣಾಮ ಆತನ ಸಹೋದರಿ ಮೃತಪಟ್ಟಿದ್ದು ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

ಸಹೋದರಿ ಆನ್ ಮೇರಿ (16)ಯ ಕೊಲೆ ಹಾಗೂ ಹೆತ್ತವರ ಕೊಲೆ ಯತ್ನ ಸಂಬಂಧ ಆರೋಪಿ ಅಲ್ಬಿನ್ ಬೆನ್ನಿ (22) ಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ತಂದೆ ಬೆನ್ನಿ ಮತ್ತು ತಾಯಿ ಬೆಸ್ಸಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಆರೋಪಿ ಅಲ್ಬಿನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಹೊಸಕೋಟೆ ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.