ಕಡಬ: ಕೆಲವು ತಿಂಗಳ ಹಿಂದೆ ನಡೆದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಕಡಬ ಪೊಲೀಸ್ ಠಾಣೆಗೆ ನಾಪತ್ತೆಯಾಗಿದ್ದ ಅನ್ಸಾರ್ ಹಾಜರಾಗಿದ್ದಾನೆ.
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ತಿಮರಡ್ಕ ಹಸೈನರ್ ಎಂಬವರ ಪುತ್ರ ಅನ್ಸಾರ್ (23) ದಿನಾಂಕ: 21-03-2019 ರಂದು ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕಾಣೆಯಾದ ಯುವಕ ಮನೆಗೆ ಮರಳಿ ಬಂದಿದ್ದು, ಇಂದು ತನ್ನ ತಂದೆಯೊಂದಿಗೆ ಕಡಬ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಹಣಕಾಸು ಕೊರತೆಯಿಂದ ಮನೆಬಿಟ್ಟು ಬೆಂಗಳೂರಿಗೆ ದುಡಿಯಲು ಹೊಗಿದ್ದಾಗಿ ಯುವಕನ ತಂದೆ ಹಸೈನಾರ್ ಹೇಳಿಕೆ ನೀಡಿದ್ದಾರೆ.