ಕಾನ್ಪುರ(ಉತ್ತರಪ್ರದೇಶ) : ಇಲ್ಲಿನ ಬಾರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲುವೆಯ ಬಳಿ ಕಾರಿನ ಹಿಂಬದಿಯ ಸೀಟಿನಲ್ಲಿ ಪತ್ರಕರ್ತರೊಬ್ಬರ ಮೃತದೇಹ ಪತ್ತೆಯಾಗಿದೆ. ಜನವರಿ 1ರಿಂದ ಪತ್ರಕರ್ತ ಅಶು ಯಾದವ್ ನಾಪತ್ತೆಯಾಗಿದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಸಿದ್ದು, ಕತ್ತು ಹಿಸುಕಿ ಹತ್ಯೆಗೈಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಕಾನ್ಪುರ ಎಸ್‌ಎಸ್‌ಪಿ ದೀಪಕ್ ಕಪೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳೆ ಕಾಯಲು ಹೋಗಿದ್ದ ರೈತನನ್ನ ಕಾಲಿನಲ್ಲಿ ತುಳಿದು ಕೊಂದ ಆನೆ
ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಕ್ಕಾಗಿ ಹುಡುಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಎಂದು ದೀಪಕ್ ಕಪೂರ್ ಹೇಳಿದ್ದಾರೆ.