ಬೀದರ್: ಬೈಕ್ ಸವಾರರ ನಿದ್ದೆಗೆಡಿಸಿದ್ದ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಹುಮನಾಬಾದ್ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಹುಮನಾಬಾದ್ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡ್ತಿದ್ದ ಆರೋಪಿ ಸಚಿನ್ ದೇವೇಂದ್ರಪ್ಪ ಗೌಡ ಎಂಬಾತ ಹುಮನಾಬಾದ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂಲತಃ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದನಾದ ಈತ ಹಲವು ದಿನಗಳಿಂದ ಹುಮನಾಬಾದ್ ತಾಲೂಕಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಇತ್ತೀಚೆಗಷ್ಟೇ ತಾಲೂಕಿನ ಗಡವಂತಿ ಗ್ರಾಮದ ಬಸವರಾಜ ಮಲ್ಲಣ್ಣ ಬೋರಳೆ ಎಂಬಾತರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು ಪ್ರಕರಣ ದಾಖಲಾಗಿತ್ತು.