ಹಾವೇರಿ: ಬುದ್ಧಿಮಾಂದ್ಯ ಮಹಿಳೆಯ ಮೇಲೆ ಕಾಮುಕನೋರ್ವ ಅತ್ಯಾಚಾರ ಎಸಗಿರುವ ಘಟನೆ ನಗರದ ಹಾನಗಲ್ ರಸ್ತೆಯಲ್ಲಿರುವ ಎಪಿಎಂಸಿ ಮುಂಭಾಗದ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿಸೆಂಬರ್ 7 ರಂದು ಬೆಳಗ್ಗಿನ ಜಾವ ಎರಡು ಗಂಟೆಯ ವೇಳೆಗೆ ಮಲಗಿದ್ದ ಬುದ್ಧಿಮಾಂದ್ಯ ಮಹಿಳೆ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಮುಖಗವಸು ಹಾಕಿಕೊಂಡು ಕಾಂಪ್ಲೆಕ್ಸ್ ಪ್ರವೇಶಿಸಿದ್ದ. ಸಿಸಿ ಕ್ಯಾಮರಾದಲ್ಲಿ ಕಾಮುಕನ ಕೃತ್ಯ ಸೆರೆಯಾಗಿದ್ದು, ಆರೋಪಿಯನ್ನು ತಸ್ಲೀಮ್ ಶೆರೆವಾಡ (23 ವರ್ಷ) ಎಂದು ಗುರುತಿಸಲಾಗಿದೆ.
ಓದಿ: ಹೈದರಾಬಾದ್ ಕಾರ್ಖಾನೆಯಲ್ಲಿ ರಿಯಾಕ್ಟರ್ ಸ್ಫೋಟ: 8 ಮಂದಿ ಕಾರ್ಮಿಕರಿಗೆ ಗಾಯ
ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರು ಈ ಘಟನೆಯ ಬಗ್ಗೆ ದೂರು ದಾಖಲಿಸಿದ್ದರು. ಸಿಪಿಐ ಟಿ.ಮಂಜಣ್ಣ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.