ಹಥ್ರಾಸ್: ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ನಡೆದ 19 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಇದೀಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿರುವುದಾಗಿ ಹಥ್ರಾಸ್ ಎಸ್ಪಿ ವಿಕ್ರಾಂತ್ ವೀರ್ ಮಾಹಿತಿ ನೀಡಿದ್ದಾರೆ.
-
#WATCH: #Hathras SP says, "Medical report from Aligarh hospital mentions injuries but doesn't confirm forced sexual intercourse. They're waiting for report of Forensics. As of now, doctors say that they're not confirming rape, can give firm opinion only when they get FSL report." pic.twitter.com/R2HK0zZ6Pv
— ANI UP (@ANINewsUP) October 1, 2020 " class="align-text-top noRightClick twitterSection" data="
">#WATCH: #Hathras SP says, "Medical report from Aligarh hospital mentions injuries but doesn't confirm forced sexual intercourse. They're waiting for report of Forensics. As of now, doctors say that they're not confirming rape, can give firm opinion only when they get FSL report." pic.twitter.com/R2HK0zZ6Pv
— ANI UP (@ANINewsUP) October 1, 2020#WATCH: #Hathras SP says, "Medical report from Aligarh hospital mentions injuries but doesn't confirm forced sexual intercourse. They're waiting for report of Forensics. As of now, doctors say that they're not confirming rape, can give firm opinion only when they get FSL report." pic.twitter.com/R2HK0zZ6Pv
— ANI UP (@ANINewsUP) October 1, 2020
ಅಲಿಗರ್ ಆಸ್ಪತ್ರೆ ನೀಡಿರುವ ವರದಿಯಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದಿಲ್ಲ. ಆದರೆ ಗಾಯದ ಗುರುತುಗಳಿವೆ ಎಂದು ಹೇಳಲಾಗಿದೆ. ಹೀಗಾಗಿ ನಾವು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.
ಸೆಪ್ಟಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.