ಚೆನ್ನೈ: ದುಬೈ ಮತ್ತು ಶಾರ್ಜಾದಿಂದ ಪ್ರಯಾಣಿಸುತ್ತಿದ್ದ ನಾನಾ ಪ್ರಯಾಣಿಕರಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 1.97 ಕೋಟಿ ರೂ. ಮೌಲ್ಯದ 3.72 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
660 ಗ್ರಾಂ. ಚಿನ್ನವನ್ನು ಚಾಕೊಲೇಟ್ ಹೊದಿಕೆಯಲ್ಲಿ ಮರೆಮಾಚಿಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಉಳಿದ 3.18 ಕೆ.ಜಿ. ಚಿನ್ನವನ್ನು 15 ಪ್ರಯಾಣಿಕರ ಗುಪ್ತಾಂಗದಲ್ಲಿ ಅಡಗಿಸಿ ಇರಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 9.79 ಲಕ್ಷ ರೂ. ಮೌಲ್ಯದ ಗಂಧದ ಮರದ ತುಂಡುಗಳು ವಶ: ಆರೋಪಿಗಳು ಅಂದರ್!
1.97 ಕೋಟಿ ರೂ. ಮೌಲ್ಯದ 3.72 ಕೆ.ಜಿ. ಬಂಗಾರವನ್ನು ಕಸ್ಟಮ್ ಆ್ಯಕ್ಟ್ ಅಡಿಯಲ್ಲಿ ದುಬೈ/ ಶಾರ್ಜಾ ವಿಮಾನಗಳಿಂದ ಆಗಮಿಸಿದ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾಗಿದೆ. 660 ಗ್ರಾಂ. ಚಿನ್ನವನ್ನು ಚಾಕೊಲೇಟ್ ಹೊದಿಕೆಯಲ್ಲಿ ಇರಿಸಿಕೊಂಡಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಗುಪ್ತಾಂಗದಲ್ಲಿ ಅಡಗಿಸಿ ಇರಿಸಿಕೊಂಡಿದ್ದ 15 ಪ್ರಯಾಣಿಕರಿಂದ 3.18 ಕೆಜಿ ಚಿನ್ನ ಜಪ್ತಿ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಪ್ರತ್ಯೇಕ ಘಟನೆಯೊಂದರಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನವನ್ನು ಸಹ ಕಸ್ಟಮ್ಸ್ ಪ್ರಾಧಿಕಾರ ವಶಪಡಿಸಿಕೊಂಡಿದೆ.