ಮೊರಾದಾಬಾದ್ (ಉತ್ತರ ಪ್ರದೇಶ): ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಬಳಿಕ ಆಕೆಯನ್ನು ಎರಡನೇ ಅಂತಸ್ತಿನ ಕಟ್ಟಡದಿಂದ ಕೆಳಗೆ ದೂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಅರವಿಂದ್ ಸಂತ್ರಸ್ತೆಯ ನೆರೆಮನೆಯ ವ್ಯಕ್ತಿಯೇ ಆಗಿದ್ದು, ಆತನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯ ತಂದೆ ಮಲಗಿರುವಾಗ ಮನೆಗೆ ನುಗ್ಗಿದ ಅರವಿಂದ್, ಆಕೆಯ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕೃತ್ಯ ಎಸಗಿದ್ದಾನೆ. ಇದರಿಂದ ಹೇಗೋ ತಪ್ಪಿಸಿಕೊಂಡು ಆಕೆ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಬಾಲಕಿಯ ಕೂಗಾಟ ಕೇಳಿ ಆಕೆಯ ತಂದೆ ಕೋಣೆಗೆ ಬರುವಷ್ಟರಲ್ಲಿ ಕಟ್ಟಡದಿಂದ ಕೆಳಗೆ ತಳ್ಳಿದ್ದನು.
ಇದನ್ನೂ ಓದಿ: ಹಿರಿಯೂರು ಬಳಿ ಸರಣಿ ಅಪಘಾತ: ಓರ್ವ ಸಾವು, ಮೂವರು ಗಂಭೀರ
ರಸ್ತೆ ಮೇಲೆ ಬಿದ್ದ ಬಾಲಕಿಯ ಬೆನ್ನಿನ ಮೂಳೆ ಮುರಿದಿದ್ದು, ತಲೆಗೆ ಬಲವಾದ ಏಟು ಬಿದ್ದಿದೆ. ಈಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು - ನೋವಿನ ಮಧ್ಯೆ ಹೋರಾಡುತ್ತಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಈ ಸಂಬಂಧ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.