ಕೊಟ್ವಾಲಿ(ಉತ್ತರ ಪ್ರದೇಶ): ಫ್ಲಿಪ್‌ಕಾರ್ಟ್ ಗೋದಾಮಿಗೆ ನುಗ್ಗಿದ ಐವರು ದರೋಡೆಕೋರರ ಗುಂಪು ಅಲ್ಲಿದ್ದ ನೌಕರರಿಗೆ ಬಂದೂಕು ತೋರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿರುವ ಘಟನೆ ರಾಂಪುರದ ಕೊಟ್ವಾಲಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.
ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಡೆಲಿವರಿ ಬಾಯ್ಸ್ ಸಂಗ್ರಹಿಸಿದ್ದ ಹಣವನ್ನು ಖದೀಮರು ದೋಚಿ ಪರಾರಿಯಾಗಿದ್ದು, ದರೋಡೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಗುನ್ ಗೌತಮ್ ತಿಳಿಸಿದ್ದಾರೆ.