ETV Bharat / jagte-raho

ಆರೋಪಿಗಳೊಂದಿಗೆ ಸೇರಿ ಜೂಜಾಟ, ಇಬ್ಬರು ಪೊಲೀಸ್ ಕಾನ್ಸ್​ಟೇಬಲ್ ಅಮಾನತು - ಪುಟ್ಟೇನಹಳ್ಳಿ‌ ಇನ್ಸ್ ಸ್ಪೆಕ್ಟರ್ ಆರ್.ಎಸ್.ಚೌಧರಿ

ಕಳೆದ ಅಕ್ಟೋಬರ್ 19ರಂದು ಜೆಪಿ ನಗರದ ಖಾಸಗಿ ಹೋಟೆಲ್​ನಲ್ಲಿ‌ ಅಂದರ್ ಬಾಹರ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪುಟ್ಟೇನಹಳ್ಳಿ‌ ಇನ್ಸಪೆಕ್ಟರ್ ಆರ್.ಎಸ್. ಚೌಧರಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಇಬ್ಬರು‌ ಕಾನ್ಸಟೇಬಲ್​ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿ 52 ಸಾವಿರ ರೂಪಾಯಿ ವಶಕ್ಕೆ‌ ಪಡೆದುಕೊಂಡಿದ್ದರು.

gambling-along-with-the-accused-two-police-constable-suspend-news
ಇಬ್ಬರು ಪೊಲೀಸ್ ಕಾನ್ಸ್​ ಸ್ಟೇಬಲ್ ಅಮಾನತು
author img

By

Published : Nov 12, 2020, 10:07 PM IST

Updated : Nov 13, 2020, 6:37 AM IST

ಬೆಂಗಳೂರು: ಜೂಜಾಟ ತಡೆಯಬೇಕಾದ ಆರಕ್ಷಕರೇ ಆರೋಪಿಗಳೊಂದಿಗೆ ಸೇರಿ ಅಂದರ್ ಬಾಹರ್ ಆಡಿದ‌ ಅರೋಪದಡಿ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ಆದೇಶ ಹೊರಡಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ ಹಾಗೂ ಗವಿಸಿದ್ದೇಶ್ ಅಮಾನತುಗೊಂಡ ಕಾನ್ಸ್​ಟೇಬಲ್​ಗಳು. ಕಳೆದ ಅಕ್ಟೋಬರ್ 19ರಿಂದ ಜೆಪಿ ನಗರದ ಖಾಸಗಿ ಹೋಟೆಲ್​ನಲ್ಲಿ‌ ಅಂದರ್ ಬಾಹರ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪುಟ್ಟೇನಹಳ್ಳಿ‌ ಇನ್ಸ್​ಪೆಕ್ಟರ್ ಆರ್.ಎಸ್. ಚೌಧರಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಇಬ್ಬರು‌ ಕಾನ್ಸ್​ಟೇಬಲ್​ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿ, 52 ಸಾವಿರ ರೂಪಾಯಿ ವಶಕ್ಕೆ‌ ಪಡೆದುಕೊಂಡಿದ್ದರು.

ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮಲ್ಲೇಶ್ ಹಾಗೂ ಗವಿಸಿದ್ದೇಶ್ ಪೊಲೀಸರು ಎಂದು ಗೊತ್ತಾಗಿದೆ.‌ ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ಅವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಆಂತರಿಕ ತನಿಖೆ ನಡೆಸಿ ಜೂಜಾಟ ಆಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.

Last Updated : Nov 13, 2020, 6:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.