ವಿಕಾರಾಬಾದ್(ತೆಲಂಗಾಣ) : ಲಾರಿ, ಆರ್ಟಿಸಿ ಬಸ್ ಹಾಗೂ ಆಟೋ ಒಂದಕ್ಕೊಂದು ಡಿಕ್ಕಿಯಾಗಿ ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ವಿಕಾರಾಬಾದ್ನ ಮೊಮಿನ್‌ಪೇಟೆ ಮಂಡಲ್ನ ಚಿತ್ತಂಪಲ್ಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಂಗರೆಡ್ಡಿಯಲ್ಲಿನ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಮಹಿಳಾ ಕಾನ್ಸ್ಟೇಬಲ್ ಬೈಕ್ : ಲಾರಿ ಹರಿದು ಕಾಲು ಕಟ್
ಘಟನಾ ಸ್ಥಳಕ್ಕೆ ಶಾಸಕ ಮೆಥುಕು ಆನಂದ್ ಭೇಟಿ ನೀಡಿದ್ದು, ಮೃತರ ಸಂಬಂಧಿಕರೊಂದಿಗೆ ಮಾತನಾಡಿದ್ದಾರೆ. ತೆಲಂಗಾಣದಲ್ಲಿ ಕಳೆದ ಕೆಲ ದಿನಗಳಿಂದ ಮಂಜು ಕವಿದ ವಾತಾವರಣವಿದ್ದು, ರಸ್ತೆಯಲ್ಲಿ ವಾಹನಗಳು ಗೋಚರಿಸದೆ ಅಪಘಾತಗಳು ಸಂಭವಿಸುತ್ತಿವೆ.