ETV Bharat / jagte-raho

ಫೈನಾನ್ಸ್ ಉದ್ಯೋಗಿ ಬ್ಯಾಗ್​ ಕಳವು ಪ್ರಕರಣ.. ಇಬ್ಬರು ಆರೋಪಿಗಳ ಬಂಧನ - ಕೆಆರ್​​ನಗರ ಪೊಲೀಸ್ ಠಾಣೆಗೆ ದೂರು

ಪ್ರಜ್ವಲ್ ಗ್ರಾಮಗಳಿಗೆ ತೆರಳಿ ಜನರಿಂದ ಹಣ ಪಡೆದು ಫೈನಾನ್ಸ್ ಕಂಪನಿಗೆ ಪಾವತಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಬಂದು ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು..

Finance employee bag theft case Arrest of two accused news
ಫೈನಾನ್ಸ್ ಉದ್ಯೋಗಿ ಬ್ಯಾಗ್​ ಕಳವು ಪ್ರಕರಣ
author img

By

Published : Dec 1, 2020, 4:09 PM IST

ಮೈಸೂರು : ಉದ್ಯೋಗಿಯೊಬ್ಬರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಕೆಆರ್‌ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ಸುರೇಶ್ ಮತ್ತು ರಮೇಶ್, ನವೆಂಬರ್ 24 ರಂದು ಕೆಆರ್‌ನಗರ ತಾಲೂಕಿನ ಚೌಕಹಳ್ಳಿ ಸಮೀಪ, ಭರತ್ ಫೈನಾನ್ಸ್ ಕಂಪನಿ ಉದ್ಯೋಗಿ ಪ್ರಜ್ವಲ್ ಅವರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ಪ್ರಜ್ವಲ್ ಗ್ರಾಮಗಳಿಗೆ ತೆರಳಿ ಜನರಿಂದ ಹಣ ಪಡೆದು ಫೈನಾನ್ಸ್ ಕಂಪನಿಗೆ ಪಾವತಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಬಂದು ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ಪ್ರಜ್ವಲ್ ತಕ್ಷಣ ಕೆಆರ್​​ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ₹40,100 ನಗದು, ಒಂದು ಟ್ಯಾಬ್ ಮತ್ತು ಕೃತ್ಯಕ್ಕೆ ಬಳಸಿದ ಬೈಕ್‌ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬೈಕ್​ನಲ್ಲಿ ಹೋಗುತ್ತಿದ್ದ ಮಹಿಳೆಯ ಬೀಳಿಸಿ ಬ್ಯಾಗ್ ಕದಿಯಲು ಯತ್ನಿಸಿದ್ದ ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.