ಕಾಬೂಲ್ : ಪತ್ರಕರ್ತೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದ ಜಲಾಲಾಬಾದ್‌ನಲ್ಲಿ ನಡೆದಿದೆ.
ಮಲಲೈ ಮಿವಾಂಡ್, ಹತ್ಯೆಯಾದ ಪತ್ರಕರ್ತೆಯಾಗಿದ್ದಾರೆ. ಖಾಸಗಿ ರೇಡಿಯೋ-ಟಿವಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಲಲೈ ಮಿವಾಂಡ್ ಅವರನ್ನು ಇಂದು ಬೆಳಗ್ಗೆ ಜಲಾಲಾಬಾದ್ ನಗರದಲ್ಲಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರಿಂದ ಮೂವರು ಪತ್ರಕರ್ತರ ಮೇಲೆ ಹಲ್ಲೆ: ಕಾಶ್ಮೀರ್ ಪ್ರೆಸ್ ಕ್ಲಬ್ನಿಂದ ಖಂಡನೆ
ದಾಳಿಯಲ್ಲಿ ಮಿವಾಂಡ್ ಅವರ ಚಾಲಕ ಕೂಡ ಸಾವನ್ನಪ್ಪಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ನವೆಂಬರ್ 12ರಂದು ಹೆಲ್ಮಂಡ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಪತ್ರಕರ್ತ ಅಲಿಯಾಸ್ ದಾಯೀ ಬಲಿಯಾಗಿದ್ದರು.