ETV Bharat / jagte-raho

ರಾಜಸ್ಥಾನದಲ್ಲಿ ತಾಲಿಬಾನ್ ಶೈಲಿಯಲ್ಲಿ ವೃದ್ಧನ ಹತ್ಯೆ ಮಾಡಿದ ಯುವಕರು - ರಾಜಸ್ಥಾನ ಕ್ರೈಂ ಸುದ್ದಿ

ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ 60 ವರ್ಷದ ವೃದ್ಧನನ್ನು ಕಲ್ಲುಗಳಿಂದ ಹೊಡೆದು ಕೊಂದ ಯುವಕರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Elderly man beaten to death
ತಾಲಿಬಾನ್ ಶೈಲಿಯಲ್ಲಿ ವೃದ್ಧನ ಹತ್ಯೆಗೈದ ಯುವಕರು
author img

By

Published : Oct 13, 2020, 5:22 PM IST

ಸಿಖರ್ (ರಾಜಸ್ಥಾನ): ಐವರು ಯುವಕರು ತಾಲಿಬಾನ್ ಶೈಲಿಯಲ್ಲಿ 60 ವರ್ಷದ ವೃದ್ಧನನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಓಂ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಸಿಖರ್ ಜಿಲ್ಲೆಯ ನಾಟ್ ಬಸ್ತಿ ಎಂಬಲ್ಲಿನ ರಾಣಿ ಸತಿ ರಸ್ತೆಯ ಬಳಿ ಟೀ ಅಂಗಡಿಯೊಂದನ್ನು ನಡೆಸುತ್ತಿದ್ದರು. ಕೆಲ ಯುವಕರೊಂದಿಗೆ ಯಾವುದೋ ವಿಚಾರಕ್ಕೆ ಸಿಂಗ್​ ಗಲಾಟೆ ಮಾಡಿಕೊಂಡಿದ್ದರು. ಇದೇ ವಿಚಾರಕ್ಕೆ ಯುವಕರು ಓಂ ಸಿಂಗ್ ಹಾಗೂ ಅವರ ಮಗನಿಗೆ ಕಲ್ಲುಗಳಿಂದ ಹೊಡೆದು ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಸಿಂಗ್​ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಉದ್ಯೋಗ್ ನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಫ್ಘಾನಿಸ್ತಾನದ ಉಗ್ರ ಸಂಘಟನೆಯಾದ ತಾಲಿಬಾನ್​, ಅಲ್ಲಿನ ಜನರು ತಪ್ಪು ಮಾಡಿದರೆ ಕಲ್ಲು ಹೊಡೆದು, ತಲೆ ಕತ್ತರಿಸಿ ಕ್ರೂರವಾಗಿ ಕೊಲ್ಲುವುದು ಕಾಮನ್​. ಈ ಹಿಂದೆ ಕಾಬೂಲ್​ನಲ್ಲಿ ನಡೆದ ಘಟನೆಯೊಂದರಲ್ಲಿ 19 ವರ್ಷದ ಯುವತಿ ಮನೆಬಿಟ್ಟು ತನ್ನ ಪ್ರಿಯತಮನೊಂದಿಗೆ ಹೋಗಿ ಮದುವೆಯಾಗಿದ್ದಕ್ಕೆ, ಆ ಊರಿನ ತಾಲಿಬಾನ್​ ಮುಖಂಡ ಆಕೆಯನ್ನು ಕಲ್ಲು ಹೊಡೆದು ಸಾಯಿಸುವಂತೆ ಆದೇಶ ನೀಡಿದ್ದನು. ಕಲ್ಲೇಟು ತಿಂದು ಗಾಯಗೊಂಡ ಯುವತಿ ಮೃತಪಟ್ಟಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಇದೇ ಮಾದರಿಯಲ್ಲಿ ಈಗ ರಾಜಸ್ಥಾನದಲ್ಲೂ ವರದಿಯಾಗಿರುವುದು ಆ ರಾಜ್ಯದ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.