ETV Bharat / jagte-raho

ಡ್ರಗ್ಸ್​ ಪ್ರಕರಣ​: ಎನ್​​ಸಿಬಿ ವಿಚಾರಣೆಗೆ ನಟಿ ಶ್ರದ್ಧಾ ಕಪೂರ್ ಹಾಜರು - ಡ್ರಗ್ಸ್ ಪ್ರಕರಣ

ಎರಡು ಡ್ರಗ್ಸ್ ಪ್ರಕರಣಗಳಲ್ಲಿ ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಹೆಸರು ಕೇಳಿ ಬಂದಿದ್ದು, ಎನ್​ಸಿಬಿ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆ ಇಂದು ವಿಚಾರಣೆಗೆ ಎನ್​​ಸಿಬಿ ಕಚೇರಿಗೆ ಶ್ರದ್ಧಾ ಆಗಮಿಸಿದ್ದಾರೆ.

Drugs Case
ನಟಿ ಶ್ರದ್ಧಾ ಕಪೂರ್
author img

By

Published : Sep 26, 2020, 12:41 PM IST

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ನೋಟಿಸ್​ ನೀಡಿದ್ದು, ಇಂದು ವಿಚಾರಣೆಗೆ ಶ್ರದ್ಧಾ ಹಾಜರಾಗಿದ್ದಾರೆ.

ಎನ್​​ಸಿಬಿ ವಿಚಾರಣೆಗೆ ನಟಿ ಶ್ರದ್ಧಾ ಕಪೂರ್ ಹಾಜರು

2018ರ ಸೂಪರ್ ​ಹಿಟ್​ 'ಚಿಚೋರೆ' ಸಿನಿಮಾದಲ್ಲಿ ಸುಶಾಂತ್ ಸಿಂಗ್​ ಜೊತೆ ನಟಿಸಿದ್ದ ಶ್ರದ್ಧಾ ಕಪೂರ್ ಹೆಸರು ಎರಡು ಡ್ರಗ್ಸ್ ಪ್ರಕರಣಗಳಲ್ಲಿ ಕೇಳಿ ಬಂದಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿರುವ ಎನ್​ಸಿಬಿ, ನಟಿಗೆ ಸಮನ್ಸ್ ಜಾರಿಗೊಳಿಸಿದ್ದು, ಎನ್​​ಸಿಬಿ ಕಚೇರಿಗೆ ಶ್ರದ್ಧಾ ಆಗಮಿಸಿದ್ದಾರೆ.

ಬುಧವಾರ ಎನ್​​ಸಿಬಿ ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಖಂಬಟ್ಟಾರಿಗೆ ಸಮನ್ಸ್ ಜಾರಿಗೊಳಿಸಿತ್ತು. ಗುರುವಾರ ವಿಚಾರಣೆಗೆ ದೀಪಿಕಾ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್, ಸಿಮೋನೆ ಹಾಗೂ ರಕುಲ್ ಪ್ರೀತ್ ಸಿಂಗ್ ಹಾಜರಾಗಿದ್ದರು. ಇನ್ನು ಇಂದು ದೀಪಿಕಾ ಪಡುಕೋಣೆ ಎನ್​​ಸಿಬಿ ಕಚೇರಿಗೆ ಬಂದಿದ್ದು, ವಿಚಾರಣೆ ಆರಂಭವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.