ETV Bharat / jagte-raho

ಡ್ರಗ್ಸ್​​ ಕೇಸ್​: ಎನ್​​ಸಿಬಿ ವಿಚಾರಣೆಗೆ ದೀಪಿಕಾ ಪಡುಕೋಣೆ ಹಾಜರು - ಕರಿಷ್ಮಾ ಪ್ರಕಾಶ್

ಎನ್​​ಸಿಬಿ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ವಿಚಾರಣೆಗಾಗಿ ಎನ್​​ಸಿಬಿ ಕಚೇರಿಗೆ ಧಾವಿಸಿದ್ದಾರೆ.

Drugs Case
ದೀಪಿಕಾ ಪಡುಕೋಣೆ
author img

By

Published : Sep 26, 2020, 10:46 AM IST

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ನೋಟಿಸ್​ ನೀಡಿದ್ದು, ಇಂದು ವಿಚಾರಣೆಗೆ ದೀಪಿಕಾ ಹಾಜರಾಗಿದ್ದಾರೆ.

ಎನ್​​ಸಿಬಿ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆ ಗೋವಾದಲ್ಲಿದ್ದ ನಟಿ ದೀಪಿಕಾ ನಿನ್ನೆ ತಮ್ಮ ಪತಿ ರಣವೀರ್​ ಸಿಂಗ್​ ಜೊತೆ ಮುಂಬೈಗೆ ಆಗಮಿಸಿದ್ದರು. ಇದೀಗ ಎನ್​​ಸಿಬಿ ಕಚೇರಿಗೆ ನಟಿ ಆಗಮಿಸಿದ್ದು, ಕಚೇರಿ ಸುತ್ತಲೂ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿದೆ.

ಎನ್​​ಸಿಬಿ ವಿಚಾರಣೆಗೆ ದೀಪಿಕಾ ಪಡುಕೋಣೆ ಹಾಜರು

ಬುಧವಾರ ಎನ್​​ಸಿಬಿ ಬಾಲಿವುಡ್ ಸೆಲೆಬ್ರಿಟಿಗಳಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಖಂಬಟ್ಟಾರಿಗೆ ಸಮನ್ಸ್ ಜಾರಿಗೊಳಿಸಿತ್ತು. ಗುರುವಾರ ವಿಚಾರಣೆಗೆ ದೀಪಿಕಾ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್, ಸಿಮೋನೆ ಹಾಗೂ ರಕುಲ್ ಪ್ರೀತ್ ಸಿಂಗ್ ಹಾಜರಾಗಿದ್ದರು.

ದೀಪಿಕಾ ತಮ್ಮ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜೊತೆ ಮಾಡಿದ ನಿಷೇಧಿತ ವಸ್ತುಗಳ ಬಗೆಗಿನ ವಾಟ್ಸ್​​​ಆ್ಯಪ್​​ ಚಾಟ್​ಗಳು​ ಸಿಕ್ಕಿದ್ದರಿಂದ ಎನ್‌ಸಿಬಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇಂದು ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್​ರ ಹೇಳಿಕೆಗಳನ್ನು ಸಹ ಎನ್​ಸಿಬಿ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

ಜೂನ್​ 14ರಂದು ಮೃತಪಟ್ಟ ಬಾಲಿವುಡ್ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.