ದಾವಣಗೆರೆ: ಮೊಬೈಲ್ ಅಂಗಡಿ ಬಾಗಿಲು ಮುರಿದು ಸೆಕೆಂಡ್ ಹ್ಯಾಂಡ್ ಮೊಬೈಲ್ಗಳನ್ನು ಕದ್ದೊಯ್ದಿರುವ ಘಟನೆ ನಗರದ ಕೆ ಬಿ ಬಡಾವಣೆಯಲ್ಲಿ ನಡೆದಿದೆ.
ಚಾಲಾಕಿ ಕಳ್ಳರು ಸುಮಾರು 2 ಲಕ್ಷ ರೂ. ಮೌಲ್ಯದ ಸೆಕೆಂಡ್ ಹ್ಯಾಂಡ್ ಮೊಬೈಲ್ಗಳನ್ನು ಎಗರಿಸಿದ್ದಾರೆ. ಕೆ ಬಿ ಬಡಾವಣೆಯಲ್ಲಿರುವ ಶಶಿ ಎಂಬುವರ ಮಾಲೀಕತ್ವದ ಎಫ್ಡಿ ಕಮ್ಯೂನಿಕೇಷನ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಕದ್ದ ಮೊಬೈಲ್ಗಳನ್ನು ಬ್ಯಾಗ್ವೊಂದರಲ್ಲಿ ಹಾಕಿಕೊಂಡು ಖದೀಮರು ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ಮನೆ ಪಕ್ಕದಲ್ಲೇ ಈ ಕಳ್ಳತನ ಆಗಿದೆ. ಮಧ್ಯಾಹ್ನ ಮೊಬೈಲ್ಗಳನ್ನು ಅಂಗಡಿಗೆ ತಂದಿದ್ದು, ಆ ದಿನ ರಾತ್ರಿಯೇ ಕಳ್ಳತನ ನಡೆದಿದೆ. ಈ ಸಂಬಂಧ ಬಡಾವಣೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.