ETV Bharat / jagte-raho

ಮಹಿಳೆಯ ವ್ಯಾನಿಟಿ ಬ್ಯಾಗ್​ ಕದ್ದ ಕಳ್ಳನಿಗೆ ಹುಬ್ಬಳ್ಳಿ ಕೋರ್ಟ್​ ನೀಡಿದ ಶಿಕ್ಷೆ ಏನ್​ ಗೊತ್ತಾ? - hubli court news

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಹಿಳೆಯ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದ ಅಪರಾಧಿಗೆ ಎರಡೂವರೆ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ 1ನೇ ಜೆಎಂಎಫ್​ಸಿ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

Court Judgement to Vanity Bag Accused
ವ್ಯಾನಿಟಿ ಬ್ಯಾಗ್​ ಕದ್ದ ಕಳ್ಳನಿಗೆ, ಎರಡೂವರೆ ವರ್ಷ ಜೈಲು
author img

By

Published : Feb 2, 2020, 9:18 AM IST

ಹುಬ್ಬಳ್ಳಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಮಹಿಳೆವೋರ್ವರ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದ ಅಪರಾಧಿಗೆ ಎರಡೂವರೆ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ 1ನೇ ಜೆಎಂಎಫ್​ಸಿ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.

ಗೋವಾದ ಪಣಜಿ ನಿವಾಸಿ ಅಸ್ಲಾಂ ಚಾಂದಸಾಬ ಕಲೇಗಾರ್ (26) ಶಿಕ್ಷೆಗೊಳಗಾದ ವ್ಯಕ್ತಿ. ಆಗಸ್ಟ್ 23, 2017 ರಂದು ಬೆಂಗಳೂರು ಮೂಲದ‌ ಗುರುದೇವಿ ಕಂಕನವಾಡಿ ಎಂಬುವರ ವ್ಯಾನಿಟಿ ಬ್ಯಾಗ್​ ಅನ್ನು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳತನ ಮಾಡಿದ್ದ. ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತು ನಿಧಾನಕ್ಕೆ ಹೊರಟಿತ್ತು. ಆ ವೇಳೆ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದ. ಅದರಲ್ಲಿ 35 ಗ್ರಾಂ ಮಾಂಗಲ್ಯ ಸರ, 1 ರಿಸ್ಟ್ ವಾಚ್, 1 ಮೊಬೈಲ್, 2500 ರೂ. ನಗದು ಇತ್ತು. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಿಳೆಯ ವ್ಯಾನಿಟಿ ಬ್ಯಾಗ್​ ಕದ್ದ ಕಳ್ಳನಿಗೆ ಎರಡೂವರೆ ವರ್ಷ ಜೈಲು

ಕದ್ದ ಆಭರಣಗಳನ್ನು ಗೋವಾದಲ್ಲಿನ ಖಾಸಗಿ ಗೋಲ್ಡ್ ಫೈನಾನ್ಸ್ ನಲ್ಲಿ ಮಾರಾಟ ಮಾಡಿದ್ದ. ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ಆರೋಪಿಯನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ 1ನೇ ಜೆಎಂಎಫ್​ಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಸುಶಾಂತ ಎಂ. ಚೌಗಲೆ ಈ ಆದೇಶ ಪ್ರಕಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.