ETV Bharat / jagte-raho

ಲಾರಿಗಳ ಮುಖಾಮುಖಿ ಡಿಕ್ಕಿ: ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಆಹುತಿ

author img

By

Published : May 3, 2019, 11:50 PM IST

ಇಂಡಿ ತಾಲೂಕಿನ ಅಂಗನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಈ ದುರ್ಘಟನೆ ಸಂಭಸಿದೆ.

ಲಾರಿಗಳ ಮುಖಾಮುಖಿ ಡಿಕ್ಕಿಯ ಬೆಂಕಿಯ ಕೆನ್ನಾಲಿಗೆ

ವಿಜಯಪುರ: ಎರಡು ಕಂಟೇನರ್ ಲಾರಿಗಳ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿ ಇಬ್ಬರು ಸಜೀವ ದಹನವಾಗಿರುವ ಘಟನೆ ಇಂಡಿ ತಾಲೂಕಿನ ಅಂಗನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ನಡೆದಿದೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ವ್ಯಕ್ತಿಗಳ ಬಗ್ಗೆ ಸದ್ಯ ಮಾಹಿತಿ ದೊರೆತಿಲ್ಲ.

ಕಂಟೇನರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯ ಸಂಭವಿಸಿದ ಕಾರಣ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅಗ್ನಿಯ ಕೆನ್ನಾಲಿಗೆ ಲಾರಿಗಳನ್ನು ವ್ಯಾಪಿಸಿದೆ. ಈ ಸಂದರ್ಭ ಇಬ್ಬರು ಸಜೀವ ದಹನವಾಗಿದ್ದು, ಓರ್ವ ಕ್ಲೀನರ್​ ಸುದೈವವಶಾತ್‌ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದ ಕಾರಣ ಕೆಲಕಾಲ ಈ ಮಾರ್ಗದಲ್ಲಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

Intro:ವಿಜಯಪುರ Body:ವಿಜಯಪುರ:
ಎರಡು ಕಂಟೇನರ್ ಲಾರಿಗಳ‌ ಮಧ್ಯೆ ಮುಖಾಮುಖಿ‌ ಡಿಕ್ಕಿಯಾಗಿ ಹೊತ್ತಿಕೊಂಡ ಬೆಂಕಿಯಲ್ಲಿ ಇಬ್ಬರು ಸಜೀವ ದಹನವಾದ ಘಟನೆ ಇಂಡಿ ತಾಲೂಕಿನ ಅಗಸಬಾಳ ಬಳಿ ಇಂದು ರಾತ್ರಿ ಸಂಭವಿಸಿದೆ.
ಲಾರಿಗಳ ಡಿಕ್ಕಿ ರಭಸಕ್ಕೆ
ಎರಡು ಕಂಟೇನರ್ ಗಳು ಹೊತ್ತು ಉರಿದಿವೆ.
ಒಂದು ಕಂಟೇನರ್ ನಲ್ಲಿದ್ದ ಕ್ಲೀನರ್ ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆ‌ ಇಂಡಿ ತಾಲೂಕಿನ ಅಗನಾಳ ಗ್ರಾಮದ NH 13 ರಲ್ಲಿ ಘಟನೆ ನಡೆದಿದೆ.
ಹೊರ್ತಿ‌ ಪೊಲೀಸ್ ಠಾಣಾ ವ್ಯಾಪ್ತಿ‌ ಪ್ರಕರಣ ದಾಖಲಾಗಿದೆ.
ಅಪಘಾತದ ಪರಿಣಾಮ‌ ಎನ್ಎಚ್ ಸಂಚಾರ ಸಪೂರ್ಣ ಬಂದ್ ವಾಗಿದ್ದು ವಾಹನ ಸವಾರರು ಪರದಾಡಬೇಕಾಯಿತು.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.