ಚಿತ್ರದುರ್ಗ: ಜಿಲ್ಲೆಯ ಪೋಲಿಸರು ಪ್ರತ್ಯೇಕ ನಾಲ್ಕು ಪ್ರಕರಣಗಳನ್ನು ಬೇಧಿಸಿ ಆರೋಪಿಗಳಿಂದ 30 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ ರಾಧಿಕಾ ತಿಳಿಸಿದರು.
ಜಿಲ್ಲಾ ಪೋಲಿಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯುನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯೂರು ಗ್ರಾಮಾಂತರ ಠಾಣೆಯ ಪೋಲಿಸರು 9 ಮನೆ ಕಳವು ಪ್ರಕರಣಗಳನ್ನು ಭೇಧಿಸಿದ್ದು, ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕದರಿ ತಾಲೂಕಿನ ಧನಂಜಯ(44), ಹಾಗು ಚಿಕ್ಕಬಳ್ಳಾಪುರ ತಾಲೂಕಿನ ನಿವಾಸಿ ಮೋಹನ (39) ಎಂಬ ಆರೋಪಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 18,75,000 ಸಾವಿರ ಮೌಲ್ಯದ 372 ಗ್ರಾಂ ಬಂಗಾರ, 210 ಗ್ರಾಂ ಬೆಳ್ಳಿ ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.
ಹಿರಿಯೂರು ನಗರ ಠಾಣೆಯ ಪೋಲಿಸರು ಚಿತ್ರದುರ್ಗ ತಾಲೂಕಿನ ಸೀಬಾರ ಗ್ರಾಮದ ಬೈಕ್ ಕಳ್ಳನಾದ ಖಾಸಿಂ ಅಲಿ(23) ಎಂಬಾತನನ್ನು ಬಂಧಿಸಿದ್ದು, ಆತನಿಂದ 1,15,000 ಸಾವಿರ ರೂಪಾಯಿ ಬೆಲೆ ಬಾಳುವ ಐದು ಮೋಟರ್ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಿ ರಾಧಿಕಾ ಮಾಹಿತಿ ನೀಡಿದರು.
ಇನ್ನೊಬ್ಬ ಬೈಕ್ ಕಳ್ಳನನ್ನು ಕೋಟೆ ಠಾಣೆಯ ಪೋಲಿಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಚಿತ್ರದುರ್ಗ ನಗರದ ರೈಲ್ವೇ ಸ್ಟೇಷನ್ ಬಡಾವಣೆಯ ನಿವಾಸಿ ಜೀಷಾನ್ (23) ಎಂದು ಗುರುತಿಸಲಾಗಿದೆ. ಈಗಾಗಲೇ ಬಂಧಿತನಿಂದ 88,000 ಸಾವಿರ ಬೆಳೆಬಾಳುವ ರಾಯಲ್ ಎನ್ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದರು.
ಎಟಿಎಂ ಕಾರ್ಡ್ ಕಳವು ಮಾಡಿ ಹಣ ದೋಚುತ್ತಿದ್ದ ಆಂದ್ರಪ್ರದೇಶದ ಆನಂತಪುರ ಜಿಲ್ಲೆಯ ಕೃಷ್ಣಮೂರ್ತಿ (42) ಎಂಬುವವನನ್ನು ಚಿತ್ರದುರ್ಗ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಬಂಧಿತನಿಂದ 1,85,500 ರೂಪಾಯಿ ನಗದು, 41 ಗ್ರಾಂ ಬಂಗಾರದ ನಾಣ್ಯಗಳು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಕಾರ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಜಿ ರಾಧಿಕಾ ತಿಳಿಸಿದರು.