ಕೋಲ್ಕತ್ತಾ: ರೋಸ್ ವ್ಯಾಲಿ ಹಗರಣ ಸಂಬಂಧ ರೋಸ್ ವ್ಯಾಲಿ ಗ್ರೂಪ್ ಮುಖ್ಯಸ್ಥ ಗೌತಮ್ ಕುಂಡು ಅವರ ಪತ್ನಿ ಸುಭ್ರಾ ಕುಂಡು ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ರೋಸ್ ವ್ಯಾಲಿ ಕಂಪನಿಯು ಸುಳ್ಳು ಭರವಸೆಗಳನ್ನು ನೀಡಿ, ಆಮಿಷವೊಡ್ಡಿ ದೇಶಾದ್ಯಂತ ಸಾರ್ವಜನಿಕರಿಂದ 17,520 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ವಂಚಿಸಿತ್ತು. 2014ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ರೋಸ್ ವ್ಯಾಲಿ ಗ್ರೂಪ್ ಮುಖ್ಯಸ್ಥ ಗೌತಮ್ ಕುಂಡು ಸೇರಿ ಇತರರ ವಿರುದ್ಧ ಕೇಸ್ ದಾಖಲಾಗಿತ್ತು. 2015ರಲ್ಲಿ ಕೋಲ್ಕತ್ತಾದಲ್ಲಿ ಗೌತಮ್ ಕುಂಡು ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.
ಇದನ್ನೂ ಓದಿ: ಹೆಸರು ಲವ್ಲಿ ಗಣೇಶ್; 22ನೇ ವಯಸ್ಸಿನಲ್ಲೇ 11 ಮದುವೆಯಂತೆ.. ವಂಚಕನ ಕಹಾನಿ ರೋಚಕ..
17 ಸಾವಿರ ಕೋಟಿ ರೂ. ಪೈಕಿ ಸುಮಾರು 11 ಸಾವಿರ ಕೋಟಿ ರೂ.ಗಳನ್ನು ಜನರಿಗೆ ಹಿಂದಿರುಗಿಸಲಾಗಿದ್ದು, ತನಿಖೆ ನಡೆಯುತ್ತಲೇ ಇದೆ. ಪ್ರಕರಣ ಸಂಬಂಧ ಕೋಲ್ಕತ್ತಾ ಮತ್ತು ಒಡಿಶಾದ ಭುವನೇಶ್ವರ ನ್ಯಾಯಾಲಯಗಳಲ್ಲಿ ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿವೆ.
ಇದೀಗ ಸುಭ್ರಾ ಕುಂಡು ಅವರನ್ನು ಕೋಲ್ಕತ್ತಾದಲ್ಲಿ ಅರೆಸ್ಟ್ ಮಾಡಿರುವ ಸಿಬಿಐ, ನಾಳೆ ಭುವನೇಶ್ವರಕ್ಕೆ ಕರೆದೊಯ್ಯಲಾಗುವುದು ಎಂದು ತಿಳಿಸಿದೆ.