ಬೆಂಗಳೂರು: ಟ್ರೋಲ್ ಮಾಡಿದ್ದ ಕಮೆಂಟ್ ವಿಡಿಯೋವನ್ನು ಶೇರ್ ಮಾಡುವ ಮೂಲಕ ಒಂದು ಸಮುದಾಯದ ವಿರೋಧ ಕಟ್ಟಿಕೊಂಡಿರುವ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ವಿರುದ್ಧ ದೂರು ಬಂದ ಬೆನ್ನಲ್ಲೇ ಹಲಸೂರು ಗೇಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಗಲಭೆ ಪ್ರಕರಣದಲ್ಲಿ ಬಂಧಿತನ ಕುಟುಂಬದ ಮಹಿಳೆ ನೀಡಿದ್ದ ಹೇಳಿಕೆಯು ಟ್ರೋಲ್ ಆಗಿ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ 7 ತಿಂಗಳ ಮಗು ಮತ್ತು 3 ತಿಂಗಳ ಮಗು ಇದೆ ಎಂದು ಮಹಿಳೆ ಹೇಳಿಕೆ ನೀಡಿದ್ದರು. ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಸ್ಕ್ರೀನ್ ಶಾಟ್ ಅನ್ನು ಪ್ರಥಮ್ ಸೇವ್ ಮಾಡಿದ್ದರು ಎನ್ನಲಾಗ್ತಿದೆ. ಇದರಲ್ಲಿ'ನಿಜವಾಗಲೂ ಇಂತಹ ಮುಗ್ಧರು ಅನ್ ಎಜುಕೇಟೆಡ್ ಇರಬೇಕು. 4 ತಿಂಗಳ ಅಂತರದಲ್ಲಿ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ? ಎಂದು ಅಚ್ಚರಿ ಜೊತೆ ಪ್ರಶ್ನೆ ಹಾಕಿದ್ದರು ಎನ್ನಲಾಗ್ತಿದೆ.

ಡಿಜೆ ಹಳ್ಳಿ ಗಲಭೆ ಕುರಿತು ಪ್ರಥಮ್ ಪೋಸ್ಟ್: ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಡಿಲೀಟ್
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಒಂದು ಕೋಮಿನ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರಥಮ್ ಪೋಸ್ಟ್ ಡಿಲೀಟ್ ಮಾಡಿದ್ದರು. ಸದ್ಯ ಪ್ರಥಮ್ ಟ್ರೋಲ್ ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಥಮ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಉಮರ್ ಫಾರೂಕ್ ದೂರು ನೀಡಿದ್ದರು. ಇದರನ್ವಯ ಐಪಿಸಿ ಸೆಕ್ಷನ್ 295ರಡಿ ಪ್ರಕರಣ ದಾಖಲಾಗಿದೆ.
