ಹೈದರಾಬಾದ್: 2018ರಲ್ಲಿನ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿಯ ತಂದೆ ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ.
ಮರ್ಯಾದಾ ಹತ್ಯೆ ಕಥೆ ಆಧಾರದ ಮೇಲೆ 'ಮರ್ಡರ್' ಎಂಬ ಚಲನಚಿತ್ರವನ್ನು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೈಗೆತ್ತಿಕೊಂಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ನರ್ಮಗೊಂಡ ಜಿಲ್ಲೆಯ ಮಿರಿಯಲಗುಡ ಟೌನ್- I ಪೊಲೀಸ್ ಠಾಣೆಯಲ್ಲಿ ವರ್ಮಾ ಮತ್ತು ನಿರ್ಮಾಪಕ ನಟ್ಟಿ ಕರುಣಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
-
Police say, "The man's father had filed a petition in Nalgonda Court stating that the film will affect the ongoing trial of the case & the film should be stalled. We've registered case under relevant sec of SC/ST (Prevention of Atrocities) Amendment Act & taken up investigation." https://t.co/IMFM53W4Ys
— ANI (@ANI) July 4, 2020 " class="align-text-top noRightClick twitterSection" data="
">Police say, "The man's father had filed a petition in Nalgonda Court stating that the film will affect the ongoing trial of the case & the film should be stalled. We've registered case under relevant sec of SC/ST (Prevention of Atrocities) Amendment Act & taken up investigation." https://t.co/IMFM53W4Ys
— ANI (@ANI) July 4, 2020Police say, "The man's father had filed a petition in Nalgonda Court stating that the film will affect the ongoing trial of the case & the film should be stalled. We've registered case under relevant sec of SC/ST (Prevention of Atrocities) Amendment Act & taken up investigation." https://t.co/IMFM53W4Ys
— ANI (@ANI) July 4, 2020
ಮರ್ಯಾದಾ ಹತ್ಯೆ ಕಥಾಹಂದರ ಇಟ್ಟುಕೊಂಡು ಸಿನಿಮಾ ನಿರ್ದೇಶನಕ್ಕೆ ವರ್ಮಾ ಮುಂದಾಗಿದ್ದರು. 'ಈ ವಿಷಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಚಿತ್ರ ನಿರ್ಮಿಸುವುದು ಸರಿಯಲ್ಲ' ಎಂದು ಸಂತ್ರಸ್ತಾ ಪ್ರಣಯ್ ಅವರ ತಂದೆ ಬಾಲಸ್ವಾಮಿ ನ್ಯಾಯಾಲಯದ ಕದ ತಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾದಲ್ಲಿ ಅವರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಬಳಸಲಾಗುತ್ತಿದೆ. ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಮತ್ತು ಸಾಮರಸ್ಯ ಕಾಪಾಡಿಕೊಳ್ಳಲು ಪೂರ್ವಾಗ್ರಹಪೀಡಿತ ಕೃತ್ಯ ಎಸಗುವುದು), ಐಪಿಸಿ ಹಾಗೂ ಎಸ್‌ಸಿ / ಎಸ್‌ಟಿ ಪಿಒಎ ತಿದ್ದುಪಡಿ ಕಾಯ್ದೆ, 2015 ಅಡಿಯಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
ನ್ಯಾಯಾಲಯದ ನಿರ್ದೇಶನದಂತೆ ದೂರು ಸ್ವೀಕರಿಸಲಾಗಿದೆ. ವರ್ಮಾ ಜೊತೆಗೆ ಈ ಪ್ರಕರಣದಲ್ಲಿ ಚಿತ್ರದ ನಿರ್ಮಾಪಕರ ಹೆಸರನ್ನು ಸೇರಿಸಲಾಗಿದೆ. ಬಾಲಸ್ವಾಮಿ ಕಳೆದ ತಿಂಗಳು ನ್ಯಾಯಾಲಯವನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.