ETV Bharat / jagte-raho

ಸಹೋದ್ಯೋಗಿಗಳ ಮೇಲೆಯೇ ಗುಂಡು ಹಾರಿಸಿದ CAF ಯೋಧ: ಇಬ್ಬರು ಬಲಿ - ಛತ್ತಿಸ್​ಗಢ

CAFನ 9ನೇ ಬೆಟಾಲಿಯನ್​ ಶಿಬಿರದಲ್ಲಿದ್ದ ಸೈನಿಕರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸಿಎಎಫ್​ ಯೋಧನೋರ್ವ ಸಹವರ್ತಿಗಳ ಮೇಲೆಯೇ ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದು, ಘಟನೆಯಲ್ಲಿ ಇನ್ನೊಬ್ಬರು ಗಾಯಗೊಂಡಿದ್ದಾರೆ.

CAF personnel opens fire, kills 2 colleagues
ಸೈನಿಕರ ಮೇಲೆಯೇ ಗುಂಡು ಹಾರಿಸಿದ CAF ಯೋಧ
author img

By

Published : May 30, 2020, 11:58 AM IST

ಛತ್ತೀಸ್​ಘಡ: ಸಿಎಎಫ್​ ಯೋಧನೋರ್ವ ಸಹವರ್ತಿಗಳ ಮೇಲೆಯೇ ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್​ಘಡದ ನಾರಾಯಣಪುರದ ಸೇನಾ ಕ್ಯಾಂಪ್​​ನಲ್ಲಿ ಕಳೆದ ರಾತ್ರಿ ನಡೆದಿದೆ.

CAFನ 9ನೇ ಬೆಟಾಲಿಯನ್​ ಶಿಬಿರದಲ್ಲಿದ್ದ ಸೈನಿಕರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸಹಾಯಕ ಪ್ಲಟೂನ್ ಕಮಾಂಡರ್ ಘಾನಶ್ಯಾಮ್​ ಕುಮೇತಿ, ತನ್ನ ಬಳಿ ಇದ್ದ ಎಕೆ-47 ರೈಫಲ್‌ನಿಂದ ಸಹವರ್ತಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಪ್ಲಟೂನ್ ಕಮಾಂಡರ್ ಬಿಂದೇಶ್ವರ್ ಸಹಾನಿ ಮತ್ತು ಹೆಡ್ ಕಾನ್ಸ್​​ಟೇಬಲ್​ ರಾಮೇಶ್ವರ್ ಸಾಹು ಮೃತಪಟ್ಟಿದ್ದು, ಮತ್ತೊಬ್ಬ ಪ್ಲಟೂನ್ ಕಮಾಂಡರ್ ಲಚ್ಚುರಾಮ್​ ಪ್ರೇಮಿ ಗಾಯಗೊಂಡಿದ್ದಾರೆ.

ಆರೋಪಿ ಕುಮೇತಿಯನ್ನು ಬಂಧಿಸಲಾಗಿದ್ದು, ಗಾಯಗೊಂಡ ಲಚ್ಚುರಾಮ್​ರನ್ನು ರಾಯಪುರ್​ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.