ಬೆಂಗಳೂರು : ನಗರದಲ್ಲಿ ಬೈಕ್, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುನಿಯಪ್ಪ ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದ ಬಳಿ ಕೆಲಸ ಮಾಡುವವರನ್ನೇ ಟಾರ್ಗೆಟ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿ ಪಾರ್ಕಿಂಗ್ ಬಳಿ ಲಾಕ್ ಮಾಡದೇ ನಿಲ್ಲಿಸಿದ ದ್ವಿಚಕ್ರ ವಾಹನಗಳನ್ನ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ.
ಓದಿ-ಗಂಗೂಲಿ ರಾಯಭಾರಿಯ ಫಾರ್ಚೂನ್ ಅಡುಗೆ ಎಣ್ಣೆ ಜಾಹೀರಾತು ತಾತ್ಕಾಲಿಕ ಸ್ಥಗಿತ
ಬಂಧಿತ ಆರೋಪಿಯಿಂದ 3 ಲಕ್ಷ ಬೆಲೆಬಾಳುವ 2 ದ್ವಿಚಕ್ರ ವಾಹನಗಳು, 1 ಲ್ಯಾಪ್ ಟಾಪ್, 16 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸ್ ತನಿಖೆಯಿಂದ ಆರೋಪಿ ಮುನಿಯಪ್ಪ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.