ಬಸವಕಲ್ಯಾಣ: ರಸ್ತೆ ದಿಬ್ಬದ ಬಳಿ ಬೈಕ್ ಸ್ಕಿಡ್ ಆಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಮೈಸಲಗಾ ತಾಂಡಾದ ಸಮೀಪ ನಡೆದಿದೆ.
ತಾಲೂಕಿನ ಚಿಕನಾಗಾಂವ ವಾಡಿಯ ಅಭಿಷೇಕ ಶಿವಶರಣಪ್ಪ ಕುಡಂಬಲೆ ( 22) ಮೃತ ಯುವಕ. ಖೇರ್ಡಾ (ಕೆ) ಕಡೆಯಿಂದ ಮರಳಿ ಗ್ರಾಮದ ಕಡೆ ಬರುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.