ETV Bharat / jagte-raho

ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಜ್ ಮೇಲೆ ಅಟ್ಯಾಕ್.. - ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ

ಸುರತ್ಕಲ್​​​ನ ಪಿಂಕಿ ನವಾಜ್ ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಪಿಂಕಿ ನವಾಜ್ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈತ ಇಂದು ಸುರತ್ಕಲ್ ಕಾಟಿಪಳ್ಳದ ಎರಡನೇ ಬ್ಲಾಕ್ ನಲ್ಲಿ ಇರುವ ವೇಳೆ, ಕಾರಿನಲ್ಲಿ ಬಂದ ತಂಡ ಅಟ್ಟಾಡಿಸಿಕೊಂಡು ತಲವಾರಿನಿಂದ ದಾಳಿ ಮಾಡಿದೆ.

Attack on Pinki Nawaz accused of Deepak Rao murder
ಪಿಂಕಿ ನವಾಜ್ ಮೇಲೆ ಅಟ್ಯಾಕ್
author img

By

Published : Feb 10, 2021, 9:16 PM IST

ಮಂಗಳೂರು: ನಗರದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯ ಮೇಲೆ ಇಂದು ಕೊಲೆ ಯತ್ನ ನಡೆದಿದೆ.

ಓದಿ: ಉಲ್ಲಂಜೆ ಬಳಿ ಮಾರಕಾಸ್ತ್ರಗಳಿಂದ ದಾಳಿ: ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ಎಸ್ಕೇಪ್

ಸುರತ್ಕಲ್​​​ನ ಪಿಂಕಿ ನವಾಜ್ ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಪಿಂಕಿ ನವಾಜ್ ಈತ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈತ ಇಂದು ಸುರತ್ಕಲ್ ಕಾಟಿಪಳ್ಳದ ಎರಡನೇ ಬ್ಲಾಕ್​ನಲ್ಲಿ ಇರುವ ವೇಳೆ, ಕಾರಿನಲ್ಲಿ ಬಂದ ತಂಡ ಅಟ್ಟಾಡಿಸಿಕೊಂಡು ತಲವಾರಿನಿಂದ ದಾಳಿ ಮಾಡಿದೆ.

ಈ ಹಲ್ಲೆ ಪ್ರಕರಣಕ್ಕೂ, ದೀಪಕ್ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ. ಶಾಕಿಬ್ ಯಾನೆ ಶಬ್ಬು ಎಂಬಾತ ನಾಲ್ಕೈದು ಮಂದಿ ತಂಡದೊಂದಿಗೆ ಈ ದುಷ್ಕೃತ್ಯ ಎಸಗಿದ್ದಾನೆ.

ಶಾಕಿಬ್ ಸರಗಳ್ಳತನ ಮತ್ತು ಇತರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುರತ್ಕಲ್ ಪೊಲೀಸರು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.