ವಿಜಯಪುರ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿಜಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ದಸ್ತಗೀರ ಮೋದಿನಸಾಬ ಬೋರಗಿ, ವಿಜಯಪುರ ಜಿಲ್ಲೆಯ ಚಾಂದಕವಟೆ ಗ್ರಾಮದ ಸುರೇಶ ಬಸಣ್ಣ ನಾಟಿಕಾರ ಮತ್ತು ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಮಹಿಬೂಬ ಗುಲಾಲಸಾಬ್ ವಾಲಿಕಾರ ಬಂಧಿತ ಆರೋಪಿಗಳು. ಇವರನ್ನು ನಗರದ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಎದುರು ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ 100 ರೂ. ಮುಖ ಬೆಲೆಯ 77 ಖೋಟಾ ನೋಟು, ಕಲರ್ ಪ್ರಿಂಟಿಂಗ್ ಮಷಿನ್ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.