ETV Bharat / jagte-raho

ಅಕುಲ್​ರ ಫಾರ್ಮ್ ಹೌಸ್, ಸಂತೋಷ್​ರ ವಿಲ್ಲಾದಲ್ಲಿ ಪಾರ್ಟಿ ಆರೋಪ: ಮೂವರಿಗೆ ಪ್ರಶ್ನೆಗಳ ಸುರಿಮಳೆ - Yuvraj'

ಫಾರ್ಮ್ ಹೌಸ್, ರೆಸಾರ್ಟ್​, ವಿಲ್ಲಾಗಳಲ್ಲಿ ಪಾರ್ಟಿ ಆಯೋಜನೆ ಮಾಡಿರುವ ಕುರಿತು ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಯುವರಾಜ್ ಬಳಿ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Sandalwood drug case
ಸ್ಯಾಂಡಲ್​ವುಡ್​ಗೆ​ ಡ್ರಗ್​ ನಂಟು ಆರೋಪ ಪ್ರಕರಣ
author img

By

Published : Sep 19, 2020, 12:57 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ​ ಡ್ರಗ್ಸ್​​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮುಂದೆ ಹಾಜರಾಗಿರುವ ನಟ, ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಕುಮಾರ್​ ಹಾಗೂ ಮಾಜಿ ಶಾಸಕ ಆರ್​.ವಿ.ದೇವರಾಜ್ ಮಗ ಯುವರಾಜ್ ಅವರ ವಿಚಾರಣೆ ಮುಂದುವರೆದಿದೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಅಕುಲ್ ಬಾಲಾಜಿ ದೊಡ್ಡಬಳ್ಳಾಪುರದ ಬಳಿ ಫಾರ್ಮ್ ಹೌಸ್ ಒಂದನ್ನ ಹೊಂದಿದ್ದು, ಅಲ್ಲಿ ಪಾರ್ಟಿ ಮಾಡಿರುವ ಆರೋಪ ಹಿನ್ನೆಲೆ ಸಿಸಿಬಿ ಪೊಲೀಸರು ಫಾರ್ಮ್ ಹೌಸ್ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಯಲಹಂಕದ ಲೇ-ರೋಮ ಗಾರ್ಡೇನಿಯಾದಲ್ಲಿ ಜುಲೈ 5 ಮತ್ತು 6ರಂದು ಯುವರಾಜ್ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಡ್ರಗ್ಸ್​​​​ ಪೆಡ್ಲರ್​​ಗಳ ಜೊತೆ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಇನ್ನು ನಟ ಸಂತೋಷ್​​ಗೆ ಈಗಾಗಲೇ ಅರೆಸ್ಟ್​ ಆಗಿರುವ ವೈಭವ್ ಜೈನ್ ಪರಿಚಯವಿದ್ದು, ಸಾದಹಳ್ಳಿ ಗೇಟ್ ಬಳಿ ಇರುವ ವೆರೋನಿಕಾ ವಿಲ್ಲಾಗೆ ಎಲೈಟ್ ಹಾಸ್ಪಿಟಾಲಿಟಿ ಅಂತಾ ಹೆಸರಿಟ್ಟು ವೈಭವ್ ಜೈನ್ ಜೊತೆ ಪಾರ್ಟ್ನರ್​​ಶಿಪ್ ಶುರು ಮಾಡಿದ್ದರು ಎಂದು ಹೇಳಲಾಗಿದೆ. ಈ ವಿಲ್ಲಾವನ್ನ ಪಾರ್ಟಿಗಳಿಗೆ ಕೊಡುವ ಕೆಲಸವನ್ನು ಮಾಡ್ತಿದ್ದ ಆರೋಪದ ಮೇರೆಗೆ ಸದ್ಯ ವಿಚಾರಣೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.