ETV Bharat / jagte-raho

ಬೆಂಗಳೂರಲ್ಲಿ 'ಧೂಮ್​' ಸ್ಟೈಲ್​ನಲ್ಲಿ 70 kg ಚಿನ್ನ ಲೂಟಿ: ಜಾರ್ಖಂಡ್​​ನಲ್ಲಿ ಕಳ್ಳರ ಸಾಮ್ರಾಜ್ಯ!

author img

By

Published : Aug 11, 2020, 8:26 PM IST

2019ರ ಡಿಸೆಂಬರ್​ನಲ್ಲಿ ಬೆಂಗಳೂರಿನಲ್ಲಿನ ಮುತ್ತೂಟ್ ಫೈನಾನ್ಸ್ ಕಚೇರಿಗೆ ಕನ್ನ ಹಾಕಿದ್ದ ಕಳ್ಳರು 16 ಕೋಟಿ ಮೌಲ್ಯದ ಸುಮಾರು 70 ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಜಾರ್ಖಂಡ್​ ಪೊಲೀಸರು ಬಂಧಿಸಿದ್ದಾರೆ.

gold theft
ಚಿನ್ನ ಕಳವು

ಸಾಹಿಬ್‌ಗಂಜ್ (ಜಾರ್ಖಂಡ್​): ಬೆಂಗಳೂರಿನ ಮುತ್ತೂಟ್​​​ ಫೈನಾನ್ಸ್​ ಕಚೇರಿಯ ಲಾಕರ್‌ನಿಂದ 70 ಕೆಜಿ ಚಿನ್ನ ಕದ್ದು ಪರಾರಿ ಆಗಿದ್ದ ಗುಂಪಿನ ಪೈಕಿ ಓರ್ವನನ್ನು ಜಾರ್ಖಂಡ್​​ನಲ್ಲಿ ಬಂಧಿಸಲಾಗಿದೆ.

ಸೈಫುದ್ದೀನ್ ಶೇಖ್ ಎಂಬ ಆರೋಪಿಯನ್ನು ರಾಧನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಆತನಿಂದ 75 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಅದನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ಬೆಂಗಳೂರಿನ ಮುತ್ತೂಟ್​ ಫೈನಾನ್ಸ್​ ಕಚೇರಿಯ ಲಾಕರ್‌ನಿಂದ ತನ್ನ ಸಹೋದ್ಯೋಗಿಗಳೊಂದಿಗೆ ಚಿನ್ನ ಕದ್ದಿದ್ದು, ಇದರಲ್ಲಿ ತಾನು ಮೂರು ಕೆ.ಜಿ ಚಿನ್ನ ಪಡೆದಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ರಾಧ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಹಲವು ಆರೋಪಿಗಳು ಚಿನ್ನ ಕದಿಯುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. 10 ರಿಂದ 15 ವರ್ಷಗಳಲ್ಲಿ ಇಲ್ಲಿ ಅನೇಕ ಜನರನ್ನು ಇತರ ರಾಜ್ಯಗಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರದೇಶದ ಎಲ್ಲಾ ಆರೋಪಿಗಳು ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಅನೇಕ ಜನರು ಕದ್ದ ಆಭರಣವನ್ನು ಮಾರುಕಟ್ಟೆ ಬೆಲೆಯ ಕಾಲು ಭಾಗಕ್ಕೆ ಖರೀದಿಸುತ್ತಾರೆ. ನಂತರ, ಅದನ್ನು ನೆರೆಯ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತದೆ.

ಕಳೆದ ವರ್ಷ ಬೆಂಗಳೂರಿನ ಮುತ್ತೂಟ್ ಫೈನಾನ್ಸ್​​ ಕಚೇರಿ ಲೂಟಿ​:

ವಿಚಾರಣೆಯ ವೇಳೆ ಬಂಧಿತ ಆರೋಪಿ 2019ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಮುತ್ತೂಟ್​​ ಫೈನಾನ್ಸ್​ ಕಚೇರಿಯ ಲಾಕರ್ ಮುರಿದು 70 ಕೆಜಿ ಚಿನ್ನ ಕದಿಯಲಾಗಿತ್ತು. ಇದರಲ್ಲಿ ಇನ್ನೂ ಅನೇಕರು ಭಾಗಿಯಾಗಿದ್ದರು. ತಲಾ ಮೂರು ಕೆಜಿ ಚಿನ್ನವನ್ನು ಎಲ್ಲರೂ ಹಂಚಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಬೆಂಗಳೂರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಂಧಿತ ಯುವಕನನ್ನು ರಿಮಾಂಡ್‌ನಲ್ಲಿ ಕರ್ನಾಟಕ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ. ಪ್ರಕರಣದ ಇತರೆ ಆರೋಪಿಗಳು ಈ ಗ್ರಾಮದವರು ಯಾರು? ಇತರ ಪಾಲುದಾರರ ಪತ್ತೆಹಚ್ಚಲಾಗುತ್ತಿದೆ ಎಂದು ಎಂದು ರಾಜಮಹಲ್ ಎಸ್‌ಡಿಪಿಒ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.