ನೆಲಮಂಗಲ: ಆಟೋ -ಶಾಲಾ ವಾಹನ ನಡುವೆ ಅಪಘಾತ ಉಂಟಾದ ಪರಿಣಾಮ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೆಲಮಂಗಲ ಸಮೀಪದ ಮಾಕಳಿ ಬಳಿ ಘಟನೆ ನಡೆದಿದ್ದು, ಸನಾಹುಲ್ಲಾ( 30) ನಾಸಿರ್ (35) ಎಂಬವರು ಸಾವನ್ನಪ್ಪಿದ್ದಾರೆ.
ಚಲಿಸುತ್ತಿದ್ದ ಆಟೋಗೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕೆಲಸ ಮುಗಿಸಿ ನೆಲಮಂಗಲದ ಕಡೆ ಆಟೋದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.