ಬಳ್ಳಾರಿ: ಲಾರಿಯ ಚಕ್ರದಡಿ ಸಿಲುಕಿ ದ್ವಿಚಕ್ರ ವಾಹನ ಸವಾರ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಟ್ಟೂರಿನ ರಾಷ್ಟ್ರೀಯ ಹೆದ್ದಾರಿ ಬೈಪಾಸ್ನಲ್ಲಿ ನಡೆದಿದೆ.
ಚಕ್ರಕ್ಕೆ ಬೈಕ್ ಸವಾರ ಸಿಲುಕಿಕೊಂಡ ಪರಿಣಾಮ ತಲೆಯ ಮೇಲ್ಭಾಗ ಮತ್ತು ಬೆನ್ನಿನ ಭಾಗ ಛಿದ್ರವಾಗಿದೆ. ಈ ಘಟನೆ ನಡೆದು ಸುಮಾರು ಎರಡು ಗಂಟೆಯಾದರೂ ಕೂಡ್ಲಿಗಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ. ಮೃತ ವ್ಯಕ್ತಿಯ ಹೆಸರು ಕೂಡ ತಿಳಿದುಬಂದಿಲ್ಲ ಎನ್ನಲಾಗಿದೆ.