ETV Bharat / jagte-raho

ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ: ಮೂವರ ದುರ್ಮರಣ - ಕೇರಳದ ತ್ರಿಶೂರ್​ ಜಿಲ್ಲೆಯ ಕುತಿರನ್

ಕೇರಳದ ತ್ರಿಶೂರ್​ ಜಿಲ್ಲೆಯ ಕುತಿರನ್​ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

Thrissur serial road accident
ಏಳು ವಾಹನಗಳ ನಡುವೆ ಸರಣಿ ಅಪಘಾತ
author img

By

Published : Dec 31, 2020, 9:39 AM IST

Updated : Dec 31, 2020, 9:47 AM IST

ತ್ರಿಶೂರ್​ (ಕೇರಳ): ಲಾರಿಗಳು, ಕಾರುಗಳು ಸೇರಿದಂತೆ ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ ಸಂಭವಿಸಿರುವ ಘಟನೆ ತ್ರಿಶೂರ್​ ಜಿಲ್ಲೆಯ ಕುತಿರನ್​ನಲ್ಲಿ ನಡೆದಿದೆ. ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಏಳು ವಾಹನಗಳ ನಡುವೆ ಸರಣಿ ರಸ್ತೆ ಅಪಘಾತ

ಇಂದು ಮುಂಜಾನೆ 6.45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ತಮಿಳುನಾಡಿನಿಂದ ಬಂದ ಗೂಡ್ಸ್​​ ಲಾರಿಯ ಬ್ರೇಕ್​ ಫೇಲ್​ ಆಗಿ, ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಚಲಿಸುತ್ತಿದ್ದ ಎರಡು ಕಾರು ಹಾಗೂ ಬೈಕ್​ಗಳಿಗೆ ಗುದ್ದಿಗೆ. ಈ ವಾಹನಗಳು ಇತರ ವಾಹನಗಳಿಗೆ ಗುದ್ದಿವೆ. ಇಬ್ಬರು ಬೈಕ್​ ಸವಾರರು ಹಾಗೂ ಕಾರಿನಲ್ಲಿದ್ದ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಓದಿ: ಕಣಿವೆಗೆ ಉರುಳಿ ಬಿದ್ದ 30 ಪ್ರಯಾಣಿಕರಿದ್ದ ಬಸ್​​!

ಘಟನೆ ಬಳಿಕ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಸ್ಥಳಕ್ಕೆ ಬಂದಿರುವ ಪೊಲೀಸರು ವಾಹನ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Last Updated : Dec 31, 2020, 9:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.