ETV Bharat / jagte-raho

ಫಾಸ್ಟ್​​​ಟ್ಯಾಗ್ ಮೊದಲ ಪ್ರಕರಣ ದಾಖಲು: ರಿಚಾರ್ಜ್ ಲಿಂಕ್ ಹೆಸರಿನಲ್ಲಿ 50 ಸಾವಿರ ರೂ.ವಂಚನೆ - Hennur Police Station, Bangalore

ಫಾಸ್ಟ್​​​ಟ್ಯಾಗ್ ಆನ್​ಲೈನ್​ ರಿಚಾರ್ಜ್ ಸಮಸ್ಯೆ ಬಗೆಹರಿಸುತ್ತೇವೆಂದು ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ, 50 ಸಾವಿರ ರೂ. ವಂಚನೆ ಎಸಗಿರುವ ದೂರು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

50-thousand-fraud-in-fast-tag-recharge-link-name
50-thousand-fraud-in-fast-tag-recharge-link-name
author img

By

Published : Jan 18, 2020, 6:16 PM IST

ಬೆಂಗಳೂರು: ಆನ್‌ಲೈನ್ ಮೂಲಕ ಫಾಸ್ಟ್​​​ಟ್ಯಾಗ್ ರಿಚಾರ್ಜ್ ಮಾಡಿಕೊಳ್ಳಲು ಹೋದವರಿಗೆ ಬ್ಯಾಂಕ್ ಹೆಸರಿನಲ್ಲಿ 50 ಸಾವಿರ ರೂ ವಂಚನೆ ಎಸಗಿದ್ದಾರೆ. ಫಾಸ್ಟ್ ಟ್ಯಾಗ್ ವಿಚಾರವಾಗಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾಗಿದೆ.

ರಾಷ್ಟೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಫಾಸ್ಟ್​​​ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲೇ ಹಲವಾರು ಬ್ಯಾಂಕ್​ಗಳು, ಆನ್​ಲೈನ್​ ಮಾರುಕಟ್ಟೆಗಳು ವಿವಿಧ ಆಫರ್​ಗಳೊಂದಿಗೆ ಫಾಸ್ಟ್​​​ಟ್ಯಾಗ್ ರಿಚಾರ್ಜ್ ಸೇವೆ ನೀಡುತ್ತಿದೆ.

ಅದರಂತೆ ಫಾಸ್ಟ್​​​ಟ್ಯಾಗ್ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಲು ಹೋದ ರಾಹುಲ್ ತಾಂತ್ರಿಕ ದೋಷ ಕಂಡು ಬಂದಿದೆ. ಈ ಸಂಬಂಧ ಆಕ್ಸಿಸ್ ಬ್ಯಾಂಕ್​ನ‌ ಅಧಿಕೃತ ಟ್ವೀಟರ್ ಖಾತೆಗೆ ದೂರು‌ ನೀಡಿದ್ದರು. ಇದಕ್ಕೆ ಕಾಯುತ್ತಿದ್ದ ಆನ್ ಲೈನ್‌ ವಂಚಕರು ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನಲ್ಲಿ ರಾಹುಲ್​ಗೆ ಕರೆ‌ ಮಾಡಿದ್ದಾರೆ. ಫಾಸ್ಟ್​​​ಟ್ಯಾಗ್ ಲಿಂಕ್​ಗೆ ಸಂಪರ್ಕಿಸಿ ಆ ಮೂಲಕ ಯುಪಿಎ ಪಿನ್ ಕೋಡ್ ಕಳುಹಿಸುವಂತೆ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ಕರೆ ಮಾಡಿರುವುದಾಗಿ ಭಾವಿಸಿ ರಾಹುಲ್ ಯುಪಿಎ ನಂಬರ್ ಕೊಟ್ಟಿದ್ದಾರೆ. ನಂಬರ್ ಕೊಡುತ್ತಿದ್ದಂತೆ ಹಂತ ಹಂತವಾಗಿ ಒಟ್ಟು 50 ಸಾವಿರ ರೂ.ಡೆಬಿಟ್ ಮಾಡಿಕೊಂಡು ವಂಚನೆ ಎಸಗಿದ್ದಾರೆ ಐನಾತಿ ಕಳ್ಳರು.

ಸದ್ಯ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Intro:Body:
ಫಾಸ್ಟ್ಯಾಗ್ ರೀಚಾರ್ಜ್ ಲಿಂಕ್ ಹೆಸರಿನಲ್ಲಿ 50 ಸಾವಿರ ರೂ.ವಂಚನೆ: ಫಾಸ್ಟ್ಯಾಗ್ ವಿಚಾರವಾಗಿ ಬೆಂಗಳೂರು ಮೊದಲ ಪ್ರಕರಣ ದಾಖಲು

ಬೆಂಗಳೂರು: ರಾಷ್ಟೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿ ಫ್ಯಾಸ್ಟ್ಯಾಗ್ ಕಡ್ಡಾಯವಾಗಿ ಅಳವಡಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.. ಇದರ ಬೆನ್ನಲೇ ಆನ್ ಲೈನ್ ಮೂಲಕ ಫಾಸ್ಟ್ ಟ್ರ್ಯಾಗ್ ರಿಚಾರ್ಜ್ ಮಾಡಿಕೊಳ್ಳಲು ಹೋದವರಿಗೆ ಬ್ಯಾಂಕ್ ಹೆಸರಿನಲ್ಲಿ 50 ಸಾವಿರ ವಂಚನೆ ಎಸಗಿದ್ದಾರೆ.. ಈ ಸಂಬಂಧ ಫಾಸ್ಟ್ ಟ್ರ್ಯಾಗ್ ವಿಚಾರವಾಗಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊದಲು ದೂರು ದಾಖಲಾಗಿದೆ.
ರಾಹುಲ್ ಹಣ ಕಳೆದುಕೊಂಡವರು..‌ಫಾಸ್ಟ್ ಟ್ರ್ಯಾಗ್ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಲು ತಾಂತ್ರಿಕ ದೋಷ ಕಂಡು ಬಂದಿದೆ..ಈ ಸಂಬಂಧ ಆಕ್ಸಿಸ್ ಬ್ಯಾಂಕ್ ನ‌ ಅಧಿಕೃತ ಟ್ವೀಟರ್ ಖಾತೆಗೆ ದೂರು‌ ನೀಡಿದ್ದರು.. ಇದಕ್ಕೆ ಕಾಯುತ್ತಿದ್ದ ಆನ್ ಲೈನ್‌ ವಂಚಕರು ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನಲ್ಲಿ ರಾಹುಲ್ ಗೆ ಕರೆ‌ ಮಾಡಿದ್ದಾರೆ.. ಫಾಸ್ಟ್ ಟ್ರ್ಯಾಗ್ ಲಿಂಕ್ ಗೆ ಸಂಪರ್ಕಿಸಿ ಆ ಮೂಲಕ ಯುಪಿಎ ಪಿನ್ ಕೋಡ್ ಕಳುಹಿಸುವಂತೆ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ಕರೆ ಮಾಡಿರುವುದು ಎಂದು ಭಾವಿಸಿ ಯುಪಿಎ ನಂಬರ್ ಕೊಟ್ಟಿದ್ದಾರೆ..ನಂಬರ್ ಕೊಡುತ್ತಿದ್ದಂತೆ ಹಂತ ಹಂತವಾಗಿ ಒಟ್ಟು 50 ಸಾವಿರ ರೂ.ಡೆಬಿಟ್ ಮಾಡಿಕೊಂಡು ವಂಚನೆ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.