ETV Bharat / jagte-raho

ಭೀಕರ ರಸ್ತೆ ಅಪಘಾತ: ಐವರು ಕಾರ್ಮಿಕರು ಬಲಿ, 11 ಮಂದಿಗೆ ಗಾಯ - ವಲಸೆ ಕಾರ್ಮಿಕರು

ಬಿಹಾರದಿಂದ ಹರಿಯಾಣಕ್ಕೆ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಟ್ರಕ್​​ಗೆ ಗುದ್ದಿದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ.

UP
ಭೀಕರ ರಸ್ತೆ ಅಪಘಾತ
author img

By

Published : Aug 31, 2020, 1:40 PM IST

ಬಹ್ರೈಚ್(ಉತ್ತರಪ್ರದೇಶ): ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಟ್ರಕ್​​ಗೆ ಗುದ್ದಿದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.

ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ

ಕೋವಿಡ್​ ಲಾಕ್​ಡೌನ್​​ ವೇಳೆ ತಮ್ಮೂರಿಗೆ ಹಿಂದಿರುಗಿದ್ದ ವಲಸೆ ಕಾರ್ಮಿಕರು ಪುನಃ ಕೆಲಸಕ್ಕೆ ಮರಳಲು ಬಿಹಾರದಿಂದ ಹರಿಯಾಣಕ್ಕೆ ಹೋಗುತ್ತಿದ್ದರು. ಆದರೆ ಇಂದು ಮುಂಜಾನೆ 5.30ರ ಸುಮಾರಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಉತ್ತರಪ್ರದೇಶದ ಪಯಾಗ್‌ಪುರದಲ್ಲಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವ 11 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.