ETV Bharat / jagte-raho

ಅಸ್ಸೋಂ ಸಿಎಂ ಪರಿಹಾರ ನಿಧಿಯಿಂದ ಹಣ ಎಗರಿಸಿದ ಐವರ ಬಂಧನ

ಅಸ್ಸೋಂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಎಗರಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್​ನ ಪೊಲೀಸ್ ವರಿಷ್ಠಾಧಿಕಾರಿ ರೋಸಿ ಕಲಿತಾ ಹೇಳಿದ್ದಾರೆ.

5 held
ಐವರ ಬಂಧನ
author img

By

Published : Sep 1, 2020, 6:05 PM IST

ಗುವಾಹಟಿ: ಅಸ್ಸೋಂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಎಗರಿಸಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್​ನ ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮ್ಮದ್ ಆರಿಫ್, ಮೊಹಮ್ಮದ್ ಆಸಿಫ್, ಶ್ರೀ ಲಾಲ್​ಜಿ, ಸರ್ವೇಶ್ ರಾವ್ ಮತ್ತು ರವೀಂದ್ರ ಕುಮಾರ್ ಬಂಧಿತ ಆರೋಪಿಗಳು. ಇವರೆಲ್ಲರೂ ಉತ್ತರ ಪ್ರದೇಶದ ಬಸ್ತಿ, ಗೋರಖ್‌ಪುರ ಮತ್ತು ಲಖನೌ ಜಿಲ್ಲೆಯವರು ಎಂಬುದು ತಿಳಿದುಬಂದಿದೆ.

ಆಗಸ್ಟ್ 10 ರಂದು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಅಕ್ರಮವಾಗಿ ಕೆಲವು ವಹಿವಾಟುಗಳು ನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಸರ್ಬಾನಂದ ಸೋನೊವಾಲ್ ನನಗೆ ಸೂಚನೆ ನೀಡಿದರು. ಆಗಸ್ಟ್ 12 ರಂದು ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆಗಸ್ಟ್ 27 ರಂದು ಬಸ್ತಿ, ಗೋರಖ್‌ಪುರ ಮತ್ತು ಲಖನೌ ಜಿಲ್ಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಎಂ ವಿಶೇಷ ವಿಜಿಲೆನ್ಸ್ ಸೆಲ್​ನ ಪೊಲೀಸ್ ವರಿಷ್ಠಾಧಿಕಾರಿ ರೋಸಿ ಕಲಿತಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.