ಕೊಡಗು: ಅಕ್ರಮವಾಗಿ ಗಾಂಜಾ ಮಾರಾಟಮಾಡಿ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದ ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದ ಕೆ.ಯು.ಆಶ್ರಫ್ ಎಂಬಾತನನ್ನು ಮಾಲು ಸಮೇತ ಬಂದಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಪೋಕ್ಲುವಿನ ಕಕ್ಕಬ್ಬೆ ಇಗ್ಗುತ್ತಪ್ಪ ದೇವಾಲಯದ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಪೋಕ್ಲು ಪೊಲೀಸರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಅಶ್ರಫ್‌ನನ್ನು ಬಂಧಿಸಿ ಆತನಿಂದ ಸುಮಾರು 300 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.