ನವದೆಹಲಿ: 26/11 ಮುಂಬೈ ದಾಳಿಯ ರುವಾರಿ ಹಾಗೂ ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ.
ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿರುವ ಆರೋಪದ ಮೇಲೆ ಲಖ್ವಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ದಾದನೆ ನಿಗ್ರಹ ವಿಭಾಗ (CTD) ಅರೆಸ್ಟ್ ಮಾಡಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಬಂಧಿಯಾಗಿದ್ದ ಲಖ್ವಿ, 2015 ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ.
-
26/11 Mumbai attack mastermind Zakiur Rehman Lakhvi arrested in Pakistan for terror financing, reports ARY News
— ANI (@ANI) January 2, 2021 " class="align-text-top noRightClick twitterSection" data="
">26/11 Mumbai attack mastermind Zakiur Rehman Lakhvi arrested in Pakistan for terror financing, reports ARY News
— ANI (@ANI) January 2, 202126/11 Mumbai attack mastermind Zakiur Rehman Lakhvi arrested in Pakistan for terror financing, reports ARY News
— ANI (@ANI) January 2, 2021
26/11 ಮುಂಬೈ ದಾಳಿ
2008 ರ ನವೆಂಬರ್ 26 ರಂದು ಲಷ್ಕರ್- ಇ -ತೊಯ್ಬಾದ 10 ಮಂದಿ ಉಗ್ರರು ಮುಂಬೈನ 12 ಕಡೆ ದಾಳಿ ನಡೆಸಿದ್ದರು. ಘಟನೆಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಮೃತಪಟ್ಟಿದ್ದರು. 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ವೇಳೆ 9 ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿದ್ದು, ಉಳಿದೊಬ್ಬ ಉಗ್ರ ಜ್ಮಲ್ ಅಮಿರ್ ಕಸಬ್ನನ್ನು ಸೆರೆ ಹಿಡಿದು 2012ರ ನವೆಂಬರ್ 21 ರಂದು ಗಲ್ಲಿಗೇರಿಸಲಾಗಿತ್ತು.
ಓದಿ: ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಎಂಟು ನಾಗರಿಕರಿಗೆ ಗಾಯ
ದಾಳಿಯ ಹಿಂದೆ ಜಾಕಿ-ಉರ್-ರೆಹಮಾನ್ ಲಖ್ವಿ, ಹಫೀಜ್ ಸಯೀದ್ ಹಾಗೂ ಸಾಜಿದ್ ಮಿರ್- ಈ ಮೂವರ ಕೈವಾಡವಿತ್ತು. ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಈಗಾಗಲೇ ಹಫೀಜ್ ಸಯೀದ್‌ಗೆ ಮುಂಬೈ ದಾಳಿ ಹಾಗೂ ಇತರ ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಾಜಿದ್ ಮಿರ್ ಬಗ್ಗೆ ಮಾಹಿತಿ ಕೊಟ್ಟವರಿಗೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.