ETV Bharat / jagte-raho

ಕರ್ನಾಟಕದ ಬಳಿಕ ಗುಜರಾತ್​ನಲ್ಲಿ ಭೀಕರ ರಸ್ತೆ ಅಪಘಾತ... ಟ್ರಕ್​ ಹರಿದು 15 ಕೂಲಿ ಆಳುಗಳು ಬಲಿ! - ಗುಜರಾತ್​ನಲ್ಲಿ ಭೀಕರ ರಸ್ತೆ ಅಪಘಾತ

Surat road Accident
ಸೂರತ್​ನಲ್ಲಿ ಭೀಕರ ರಸ್ತೆ ಅಪಘಾತ
author img

By

Published : Jan 19, 2021, 7:23 AM IST

Updated : Jan 19, 2021, 2:33 PM IST

07:19 January 19

ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಮಲಗಿದ್ದವರ ಮೇಲೆ ಟ್ರಕ್​​ ಹರಿಸಿದ ಪರಿಣಾಮ 15 ಮಂದಿ ಕಾರ್ಮಿಕರು ಪ್ರಾಣಕಳೆದುಕೊಂಡಿದ್ದಾರೆ.

ಸೂರತ್​ನಲ್ಲಿ ಭೀಕರ ರಸ್ತೆ ಅಪಘಾತ
ಗುಜರಾತ್​ನಲ್ಲಿ ಭೀಕರ ರಸ್ತೆ ಅಪಘಾತ

ಸೂರತ್​ (ಗುಜರಾತ್​): ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರಕ್​​ ಹರಿದು 15 ಮಂದಿ ಮೃತಪಟ್ಟಿರುವ ದಾರುಣ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.

ಸೂರತ್​ನ ಕಿಮ್​ ರಸ್ತೆಯಲ್ಲಿ ಇಂದು ನಸುಕಿನ ಜಾವ ಅಪಘಾತ ಸಂಭವಿಸಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಫುಟ್​ಪಾತ್​ನಲ್ಲಿ ಮಲಗಿದ್ದ ಸುಮಾರು 20 ಕಾರ್ಮಿಕರ ಮೇಲೆ ಟ್ರಕ್​​ ಹರಿಸಿದ್ದಾನೆ.  

ಮೃತರೆಲ್ಲರೂ ರಾಜಸ್ಥಾನದ ಬನ್ಸ್​ವಾಡಾ ಮೂಲದವರು. ಇನ್ನೂ ಐವರ ಸ್ಥತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಿಎಂ ಜಡೇಜಾ ತಿಳಿಸಿದ್ದಾರೆ.

ಇದನ್ನೂ ಓದಿ: 2025ರ ಒಳಗೆ ಶೇ.50 ರಷ್ಟು ರಸ್ತೆ ಅಪಘಾತ ಇಳಿಸುವ ಗುರಿ: ನಿತಿನ್ ಗಡ್ಕರಿ

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು​ ಚಾಲಕ ಹಾಗೂ ಕ್ಲೀನರ್​ನನ್ನು ಬಂಧಿಸಿ, ಟ್ರಕ್ ವಶಪಡಿಸಿಕೊಂಡಿದ್ದಾರೆ. ಚಾಲಕ ಕುಡಿದ ಅಮಲಿನಲ್ಲಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಅವಘಡದಲ್ಲಿ ಆರು ತಿಂಗಳ ಕಂದಮ್ಮ ಬದುಕುಳಿದಿದೆ, ಆದರೆ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದೆ. ಮಗ ಅಳುತ್ತಿರುವ ದನಿ ಕೇಳಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.  

Last Updated : Jan 19, 2021, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.