ಕೋಪನ್ಹೇಗನ್( ಡೆನ್ಮಾರ್ಕ್): ಜರ್ಮನಿ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಇಂದು ಡೆನ್ಮಾರ್ಕ್ಗೆ ಭೇಟಿ ನೀಡಿದರು. ಡೆನ್ಮಾರ್ಕ್ನಲ್ಲಿ ಬ್ಯೂಸಿ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಿದರು. ಇಬ್ಬರೇ ನಾಯಕರು ಮಹತ್ವದ ಮಾತುಕತೆ ನಡೆಸಿ ಗಮನ ಸೆಳೆದರು.
ಇದನ್ನು ವೀಕ್ಷಿಸಿ:ಡೆನ್ಮಾರ್ಕ್ನಲ್ಲಿ ಮೋದಿ, ಭಾರತೀಯರೊಂದಿಗೆ ನೇರ ಸಂವಾದ
ನಂತರ ಪ್ರಧಾನಿ ಕೋಪನ್ಹೇಗನ್ನಲ್ಲಿ ಭಾರತೀಯ ಸಮುದಾಯದ ಜೊತೆ ಸಂವಾದ ನಡೆಸಿದರು. ಈ ವೇಳೆ, ಕನಿಷ್ಠ ಐದು ಜನಕ್ಕೆ ಭಾರತಕ್ಕೆ ಭೇಟಿ ನೀಡುವಂತೆ ಸ್ಪೂರ್ತಿ ತುಂಬಿ, ಚಲೋ ಇಂಡಿಯಾ ಘೋಷಣೆ ಮೂಲಕ ಅಲ್ಲಿನ ಜನರಿಗೆ ಸ್ಪೂರ್ತಿ ತುಂಬಿ ಎಂದು ಕರೆ ನೀಡಿದರು.
-
Gearing up for the community programme in Copenhagen.
— PMO India (@PMOIndia) May 3, 2022 " class="align-text-top noRightClick twitterSection" data="
PM @narendramodi will be speaking to the Indian community in Denmark shortly. pic.twitter.com/p3nqIYg9Kq
">Gearing up for the community programme in Copenhagen.
— PMO India (@PMOIndia) May 3, 2022
PM @narendramodi will be speaking to the Indian community in Denmark shortly. pic.twitter.com/p3nqIYg9KqGearing up for the community programme in Copenhagen.
— PMO India (@PMOIndia) May 3, 2022
PM @narendramodi will be speaking to the Indian community in Denmark shortly. pic.twitter.com/p3nqIYg9Kq
ಈ ವಿಶ್ವದಲ್ಲಿನ ಹಲವು ಸಮಸ್ಯೆಗಳನ್ನು ನಿವಾರಿಸಲು ನಾವೆಲ್ಲ ಒಗ್ಗಟ್ಟಾಗಿ ಹೋರಾಡಬೇಕು. ಜಂಟಿಯಾಗಿ ಇಬ್ಬರು ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು ಎಂದು ಇದೇ ವೇಳೆ ಡ್ಯಾನಿಸ್ ಮಿತ್ರರಿಗೆ ಪ್ರಧಾನಿ ಮನವಿ ಮಾಡಿದರು.
ಭಾರತ ಬಡತನದ ವಿರುದ್ಧ ಹೋರಾಡುತ್ತಿದೆ, ಅದನ್ನು ಹೋಗಲಾಡಿಸುವತ್ತ ಹೆಜ್ಜೆ ಇಟ್ಟಿದೆ. ವಿಶ್ವದಲ್ಲಿ ಈಗ ಬಡತನ ಕಡಿಮೆ ಆಗುತ್ತಿದೆ ಎಂದ ಮೋದಿ, ಭಾರತ ಬಡತನವನ್ನು ಹೋಗಲಾಡಿಸಲು ಹಲವು ಮೂಲ ಸೌಕರ್ಯಗಳನ್ನ ಒದಗಿಸಿದೆ. ಎಲ್ಲರಿಗೂ ವಸತಿ, ಶೌಚಾಲಯ, ಕುಡಿವ ನೀರು, ಉಚಿತ ಆರೋಗ್ಯ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡಲು ಯೋಜನೆ ರೂಪಿಸಿದೆ ಎಂದು ಪ್ರತಿಪಾದಿಸಿದರು.
ಇದನ್ನು ಓದಿ:ಮಗುವಿನೊಂದಿಗೆ ಮಗುವಾದ ನಮೋ.. ಜರ್ಮನಿಯಲ್ಲಿ ಪುಟಾಣಿ ಜೊತೆ ತುಂಟಾಟ!