ETV Bharat / international

ವಿಶ್ವದ ಅತಿ ಹಿರಿಯ ವ್ಯಕ್ತಿ ಮರಿಯಾ ಬ್ರನ್ಯಾಸ್ ಮೊರೆರಾ: ಇವರಿಗೀಗ 115 ವರ್ಷ! - ಈಟಿವಿ ಭಾರತ ಕನ್ನಡ

115 ವರ್ಷ 321 ದಿನ ವಯಸ್ಸಾಗಿರುವ ಮರಿಯಾ ಬ್ರನ್ಯಾಸ್ ಮೊರೆರಾ ಈಗ ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಬಿರುದನ್ನು ಹೊಂದಿದ್ದಾರೆ. ಇವರು ಎರಡೂ ವಿಶ್ವಯುದ್ಧಗಳು, ಸ್ಪ್ಯಾನಿಷ್ ಅಂತರ್ಯುದ್ಧ ಮತ್ತು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ಮತ್ತು 2020 ರಲ್ಲಿ ಕೋವಿಡ್​-19 ಈ ಎಲ್ಲದಕ್ಕೂ ಜೀವಂತ ಸಾಕ್ಷಿಯಾಗಿದ್ದಾರೆ.

ವಿಶ್ವದ ಅತಿ ಹಿರಿಯ ವ್ಯಕ್ತಿ ಮರಿಯಾ ಬ್ರನ್ಯಾಸ್ ಮೊರೆರಾ: ಇವರಿಗೀಗ 115 ವರ್ಷ!
worlds-oldest-person-spanish-woman-survived-both-world-wars-spanish-flu-and-covid-pandemics
author img

By

Published : Jan 20, 2023, 7:18 PM IST

ಮ್ಯಾಡ್ರೀಡ್​( ಸ್ಪೇನ್)​ : ಈಗ ಸ್ಪೇನ್‌ನಲ್ಲಿ ವಾಸಿಸುತ್ತಿರುವ ಯುಎಸ್‌ನಲ್ಲಿ ಜನಿಸಿದ ವಿಶ್ವದ ಅತ್ಯಂತ ವಯೋವೃದ್ಧ ಮಹಿಳೆ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಎರಡೂ ವಿಶ್ವಯುದ್ಧಗಳು, ಸ್ಪ್ಯಾನಿಷ್ ಅಂತರ್ಯುದ್ಧ ಮತ್ತು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ಮತ್ತು 2020 ರಲ್ಲಿ ಕೋವಿಡ್​-19 ಈ ಎಲ್ಲ ಯುಗಗಳನ್ನೂ ಜೀವಂತವಾಗಿ ಕಂಡು ಇನ್ನೂ ಬದುಕಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಈ ಮಾಹಿತಿ ನೀಡಲಾಗಿದೆ. 118 ವರ್ಷ ವಯಸ್ಸಿನ ಲುಸಿಲ್ ರಾಂಡನ್ ಅವರ ಮರಣದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಈಗ ಜೀವಂತವಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆ ಮತ್ತು ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದೆ.

  • evitar el retard de la núvia”. Però el destí ens tenia preparada una mala jugada. Hores esperant al capellà, fins que arribà un senyor i ens diu que el capellà no vindrà, perquè s’ha mort. Quin daltabaix! No hi havia telèfon. Un cotxe va tenir que baixar fins a Girona a buscar 👇 pic.twitter.com/qfNDw6zUCU

    — Super Àvia Catalana (@MariaBranyas112) November 5, 2022 " class="align-text-top noRightClick twitterSection" data=" ">

"ನನಗೆ ವಯಸ್ಸಾಗಿದೆ, ತುಂಬಾ ವಯಸ್ಸಾಗಿದೆ, ಆದರೆ ನಾನು ಈಡಿಯಟ್ ಅಲ್ಲ" ಎಂದು ಅವರ ಟ್ವಿಟರ್ ಬಯೋದಲ್ಲಿ ಬರೆಯಲಾಗಿದೆ. ಅಜ್ಜಿಯ ಪೋಷಕರು ಅಮೆರಿಕಕ್ಕೆ ವಲಸೆ ಹೋದ ಒಂದು ವರ್ಷದ ನಂತರ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 4 ಮಾರ್ಚ್ 1907 ರಂದು ಮಾರಿಯಾ ಜನಿಸಿದರು. ಎಂಟು ವರ್ಷಗಳ ನಂತರ, ಅವರು ಸ್ಪೇನ್‌ಗೆ ಮರಳಲು ನಿರ್ಧರಿಸಿದರು. ನಂತರ ಅಲ್ಲಿ ಅವರು ಕ್ಯಾಟಲೋನಿಯಾದಲ್ಲಿ ನೆಲೆಸಿದರು. ಜನವರಿ 20, 2023 ರಲ್ಲಿದ್ದಂತೆ ಮೊರೆರಾ ಅವರಿಗೆ 115 ವರ್ಷ 322 ದಿನ ವಯಸ್ಸಾಗಿದೆ.

ಪ್ರಸ್ತುತ, ಮಾರಿಯಾ ರೆಸಿಡೆನ್ಸಿಯಾ ಸಾಂಟಾ ಮರಿಯಾ ಡೆಲ್ ತುರಾದಲ್ಲಿ ವಾಸಿಸುತ್ತಿದ್ದಾರೆ. ಇದು ಕಳೆದ 22 ವರ್ಷಗಳಿಂದ ಅವರ ಮನೆಯಾಗಿದೆ. ಅವರು ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ ಮತ್ತು ಈ ಬಾರಿಯ ಹುಟ್ಟುಹಬ್ಬವು ಜಗತ್ತಿನ ಗಮನ ಸೆಳೆದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಅವರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗುರುವಾರ ಹೇಳಿದೆ. ಮಾರಿಯಾ ಅವರು ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿಯಾಗಿದ್ದಾರೆ. ಇದು ಸಂಭ್ರಮಕ್ಕೂ ಕಾರಣವಾಗಿದೆ. ಈ ವಿಶೇಷವಾದ ಈವೆಂಟ್ ಅನ್ನು ಆಚರಿಸಲು ನಾವು ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಸಣ್ಣ ಆಚರಣೆ ಮಾಡುತ್ತೇವೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

  • Después de la muerte de la francesa Lucile Randon, la nueva persona viva más longeva del mundo es María Branyas Morera (nacida el 4 de marzo de 1907 en Estados Unidos), de 115 años y 319 días, vive en la ciudad de Olot, Cataluña, España. pic.twitter.com/wdJGWE2Sn2

    — LongeviQuest Supercentenarios (@Supercentenaria) January 17, 2023 " class="align-text-top noRightClick twitterSection" data=" ">

2019 ರಲ್ಲಿ ಟ್ವಿಟರ್‌ಗೆ ಸೇರ್ಪಡೆಗೊಂಡ ಮಾರಿಯಾ, ತನ್ನ ಮಗಳ ಸಹಾಯದಿಂದ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಿಸ್ತು, ನೆಮ್ಮದಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಂಪರ್ಕ, ಪ್ರಕೃತಿಯೊಂದಿಗಿನ ಸಂಪರ್ಕ, ಭಾವನಾತ್ಮಕ ಸ್ಥಿರತೆ, ಚಿಂತೆರಹಿತ ಬದುಕು, ವಿಷಾದವಿಲ್ಲ, ಸಾಕಷ್ಟು ಸಕಾರಾತ್ಮಕತೆ ಮತ್ತು ಕೆಟ್ಟ ಜನರಿಂದ ದೂರವಿರುವುದು ಮುಂತಾದ ಕಾರಣಗಳಿಂದ ನಾನು ಇಷ್ಟೊಂದು ದೀರ್ಘಾಯುಷಿಯಾಗಿರಲು ಸಾಧ್ಯವಾಗಿದೆ ಎಂದು ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿಯಾಗಿರುವ ಮಾರಿಯಾ ಹೇಳಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಮಾರಿಯಾಳ ತಂದೆ ಅಮೆರಿಕದಿಂದ ಸ್ಪೇನ್‌ಗೆ ತೆರಳಲು ಅಟ್ಲಾಂಟಿಕ್ ಸಮುದ್ರಯಾನದಲ್ಲಿ ಮೋಸದ ಕಾರಣದಿಂದ ಬದುಕುಳಿಯಲಿಲ್ಲ. ಪ್ರಯಾಣದ ಕೊನೆಯಲ್ಲಿ ಅವರು ಶ್ವಾಸಕೋಶದ ಕ್ಷಯರೋಗಕ್ಕೆ ಬಲಿಯಾದರು. ಮಾರಿಯಾ ತನ್ನ ಸಹೋದರರೊಂದಿಗೆ ಆಟವಾಡುತ್ತಿದ್ದಾಗ ಬಿದ್ದ ನಂತರ ಹಡಗಿನಲ್ಲಿ ಗಾಯಗೊಂಡಿದ್ದರು, ಇದರ ಪರಿಣಾಮವಾಗಿ ಒಂದು ಕಿವಿಯಲ್ಲಿ ಶಾಶ್ವತ ಶ್ರವಣ ನಷ್ಟವಾಗಿದೆ. ನಂತರ ಇವರ ಕುಟುಂಬವು 1915 ರಲ್ಲಿ ಅಂದರೆ ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಬಾರ್ಸಿಲೋನಾಗೆ ಸ್ಥಳಾಂತಗೊಂಡಿತ್ತು.

ಮರಿಯಾಗೆ ಮೂವರು ಮಕ್ಕಳು, 11 ಮೊಮ್ಮಕ್ಕಳು ಮತ್ತು 13 ಮೊಮ್ಮಕ್ಕಳು ಇದ್ದಾರೆ. ವೃದ್ಧೆಯ ಪತಿ ಜೋನ್ ಮೊರೆಟ್ ಕ್ಯಾಟಲಾನ್ ವೈದ್ಯರಾಗಿದ್ದರು. ಅವರನ್ನು ಮಾರಿಯಾ 1931 ರಲ್ಲಿ ವಿವಾಹವಾಗಿದ್ದರು. 2020 ರಲ್ಲಿ ತನ್ನ 113 ನೇ ಹುಟ್ಟುಹಬ್ಬವನ್ನು ಆಚರಿಸಿದ ಕೆಲ ವಾರಗಳ ನಂತರ ಮಾರಿಯಾ ಕೋವಿಡ್ ವೈರಸ್‌ಗೆ ತುತ್ತಾಗಿದ್ದರು. ಆದರೆ ಅವರು ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದು ವಿಶೇಷ. ಮರಿಯಾ ತಮ್ಮ ಜೀವಿತಾವಧಿಯಲ್ಲಿ ಹಲವು ವಿಶ್ವ ಸಾಂಕ್ರಮಿಕಗಳನ್ನು ಯಶಸ್ವಿಯಾಗಿ ಎದುರಿಸಿಯೂ ಆರೋಗ್ಯವಂತರಾಗಿದ್ದಾರೆ.

ಇದನ್ನೂ ಓದಿ: ಭಾರತದ ಅತಿ ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಇನ್ನಿಲ್ಲ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.