ಹೈದರಾಬಾದ್: ಚೀನಾದ ಚಾಂಗ್‌ಕಿಂಗ್ ಬಳಿಯ ಬೆಟ್ಟದ ಮೇಲೆ ವಿಶ್ವದ ಅತಿದೊಡ್ಡ ರೆಸ್ಟಾರೆಂಟ್ ಇದೆ. ಈ ರೆಸ್ಟಾರೆಂಟ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 900 ಟೇಬಲ್‌ಗಳಿವೆ. ಏಕಕಾಲದಲ್ಲಿ ಈ ರೆಸ್ಟಾರೆಂಟ್‌ನಲ್ಲಿ ಸುಮಾರು 5,800 ಗ್ರಾಹಕರು ಭೋಜನವನ್ನು ಸವಿಯಬಹುದು. ಇದು ಅಷ್ಟೊಂದು ದೊಡ್ಡ ರೆಸ್ಟಾರೆಂಟ್ ಅನ್ನೋದಕ್ಕೆ ಈ ಅಂಕಿ- ಅಂಶಗಳೇ ಸಾಕು.
ಈ ಹಿಲ್‌ಟಾಪ್ ರೆಸ್ಟಾರೆಂಟ್ನ ಮೂಲ ಹೆಸರು 'ಪಿಪಾ ಯುವಾನ್'. ಈ 3,300 ಚದರ ಅಡಿ ಜಾಗದಲ್ಲಿ, ಈ ರೆಸ್ಟಾರೆಂಟ್ ಸ್ಥಾಪನೆ ಮಾಡಲಾಗಿದೆ. ಇಲ್ಲಿ ನೀವು ನಿಮ್ಮ ಟೇಬಲ್ ಎಲ್ಲಿ ಬುಕ್ ಆಗಿದೆ ಎಂಬುದನ್ನು ಹುಡುಕಲು ಸಿಬ್ಬಂದಿಯ ಸಹಾಯಬೇಕೇ ಬೇಕು. ಅಷ್ಟೊಂದು ದೊಡ್ಡದು ಈ ಈರೆಸ್ಟಾರೆಂಟ್.
ಇದು ಕಳೆದ ವರ್ಷ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತಿದೊಡ್ಡ ರೆಸ್ಟಾರೆಂಟ್ ಎಂಬ ಸ್ಥಾನವನ್ನು ಪಡೆದುಕೊಂಡಿದೆ. ಪಿಪಾ ಯುವಾನ್‌ನಲ್ಲಿ, ಗ್ರಾಹಕರು ಯಾವ ಸವಿಯಾದ ಆರ್ಡರ್ ಮಾಡಿದರೂ ಖಾದ್ಯವನ್ನು ಬಡಿಸಲು ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಇಲ್ಲಿಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬುದು ಇನ್ನೊಂದು ವಿಶೇಷ.
ನೀವು ಈ ರೆಸ್ಟಾರೆಂಟ್ಗೆ ಬುಕ್ಕಿಂಗ್ ಮಾಡದೇ ಬಂದರೆ, ನಿಮಗೆ ಜಾಗ ಸಿಗುವುದು ಕಷ್ಟ ಕಷ್ಟ. ಬೇಸಿಗೆ ಕಾಲದಲ್ಲಿ ಇಲ್ಲಿ ಟೇಬಲ್ ಸಿಗುವುದು ಅಸಾಧ್ಯವೇ ಸರಿ. ಈ ಪ್ರಸಿದ್ಧ ಹಿಲ್ ರೆಸ್ಟಾರೆಂಟ್ಗೆ ಚೀನಾದ ಎಲ್ಲೆಡೆಯಿಂದ ಪ್ರವಾಸಿಗರು ಹರಿದು ಬರುತ್ತಾರೆ.
ಒಂದೇ ರೆಸ್ಟಾರೆಂಟ್‌ನಲ್ಲಿ ಟನ್‌ಗಟ್ಟಲೆ ಖಾದ್ಯಗಳನ್ನು ಎಲ್ಲಾ ಸಮಯದಲ್ಲೂ ತಯಾರಿಸಿದರೆ ಹೇಗಿರುತ್ತದೆ ಎಂದು ಊಹಿಸಿ. ಆದ್ದರಿಂದ, ನೂರಾರು ಮಾಣಿಗಳು, ಅಡುಗೆಯವರು, ಬಾಣಸಿಗರು ಮತ್ತು 25 ಕ್ಯಾಷಿಯರ್‌ಗಳು ಈ ಹೋಟೆಲ್ನಲ್ಲಿ ಇದ್ದಾರೆ. ರೆಸ್ಟಾರೆಂಟ್ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.
ರಾತ್ರಿ ಸಮಯದಲ್ಲಿ ಅನೇಕ ಪ್ರವಾಸಿಗರು ರೆಸ್ಟಾರೆಂಟ್ ಗೆ ಭೇಟಿ ನೀಡುತ್ತಾರೆ. ಏಕೆಂದರೆ ಆ ಸಮಯದಲ್ಲಿ ಇಡೀ ಬೆಟ್ಟವು ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಸುಂದರವಾಗಿ ಬೆಳಗುತ್ತದೆ. ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಈ ಬೆಟ್ಟದ ಮೇಲಿರುವ ಪಿಪಾ ಯುವಾನ್ ಒಮ್ಮೆ ಭೇಟಿ ನೀಡೇ ನೀಡ್ತಾರೆ.
ಪಿಪಾ ಯುವಾನ್‌ನಲ್ಲಿ ಕೇಳಿ ಬರುವ ಸದ್ದು ಜಾತ್ರಾ ಸಂಭ್ರಮವನ್ನು ನೆನಪಿಸದೇ ಇರದು. " ಭಕ್ಷ್ಯಗಳು ಬೃಹತ್ ಪ್ರಮಾಣದಲ್ಲಿ ತಯಾರಿಸಲ್ಪಟ್ಟಿರುವುದರಿಂದ ರುಚಿಕರವಾಗಿರುತ್ತವೆಯೇ ಎಂದು ನಾವು ಅನುಮಾನಿಸುತ್ತೇವೆ. ಆದರೆ. ನೆಟಿಜನ್‌ಗಳು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ"
ಭಾರಿ ಪ್ರಮಾಣದಲ್ಲಿ ಗ್ರಾಹಕರು ಹೋಟೆಲ್ಗೆ ಹರಿದು ಬಂದರೂ ರುಚಿಯಲ್ಲಿ ಯಾವುದೇ ರಾಜೀಯಾಗದೇ, ಅದೇ ಟೆಸ್ಟ್ ನೀಡುತ್ತಿದೆ ಈ ರೆಸ್ಟಾರೆಂಟ್ನ ಸಿಬ್ಬಂದಿ. ಭಾರಿ ರಶ್ ಇರುವ ಸಮಯದಲ್ಲಿ ಆಹಾರ ವಿತರಣೆ ಕೊಂಚ ತಡವಾದರೂ ರುಚಿ ವಿಚಾರದಲ್ಲಿ ರೆಸ್ಟೋರೆಂಟ್ ಆಡಳಿತ ರಾಜಿ ಮಾಡಿಕೊಳ್ಳುವುದಿಲ್ಲ ಅಂತಾರೆ ಇಲ್ಲಿಗೆ ಭೇಟಿ ನೀಡುವ ಗ್ರಾಹಕರು.
ಇನ್ಯಾಕೆ ತಡ ನೀವು ಚೀನಾ ಪ್ರವಾಸ ಹೋಗ್ತಿದ್ದೀರಿ ಎಂದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಿ, ಇಲ್ಲಿನ ರುಚಿಯನ್ನು ನೀವು ಒಮ್ಮೆ ಸವಿಯಿರಲ್ಲ.
ಇದನ್ನು ಓದಿ:ಪ್ರಿಸ್ಕ್ರಿಪ್ಷನ್ ಇಲ್ಲದೇ ತುರ್ತು ಗರ್ಭ ನಿರೋಧಕ ಮಾತ್ರೆಗಳ ಪ್ರಾಯೋಗಿಕ ಮಾರಾಟಕ್ಕೆ ಸಮ್ಮತಿ.. ಎಲ್ಲಿ?