ETV Bharat / international

ಮೇ​ 9ಕ್ಕೆ ರಷ್ಯಾ-ಉಕ್ರೇನ್​ ಯುದ್ಧ ಮುಕ್ತಾಯ? ಇದು ಉಕ್ರೇನ್ ಸೇನೆಯ ಅಂದಾಜು - ಮೇ 9 ಕ್ಕೆ ರಷ್ಯಾ ಯುದ್ಧ ಕೊನೆ

ಉಕ್ರೇನ್​ ಮತ್ತು ರಷ್ಯಾ ಮಧ್ಯೆ ಯುದ್ಧ ಶುರುವಾಗಿ ತಿಂಗಳಾಗಿದೆ. ಈ ಮಧ್ಯೆ ರಷ್ಯಾ ಮೇ 9ರಂದು ಯುದ್ಧ ಮುಗಿಸಲು ಬಯಸಿದೆ ಎಂದು ಉಕ್ರೇನ್​ ಸೇನೆ ಹೇಳಿದೆ.

war-ends
ಯುದ್ಧ ಮುಕ್ತಾಯ
author img

By

Published : Mar 25, 2022, 4:05 PM IST

ಕೀವ್​: ಉಕ್ರೇನ್​ ಮೇಲೆ ಯುದ್ಧ ಘೋಷಿಸಿ ಒಂದು ತಿಂಗಳಿನಿಂದ ಸತತವಾಗಿ ಬಾಂಬ್​ಗಳ ಸುರಿಮಳೆಗೈದು ಉಕ್ರೇನ್​ ನಗರಗಳನ್ನು ಧ್ವಂಸ ಮಾಡಿ, ಸಾವಿರಾರು ಜನರ ಪ್ರಾಣಹಾನಿಗೆ ಕಾರಣವಾಗಿರುವ ರಷ್ಯಾ ಸೇನೆ ಮೇ 9 ರಂದು ಯುದ್ಧ ಕೊನೆಗೊಳಿಸಲು ಬಯಸಿದೆ ಎಂದು ಉಕ್ರೇನ್​ ಸೇನೆ ತಿಳಿಸಿದೆ. ಕೀವ್​ ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ, ಮೇ 9 ರೊಳಗೆ ಯುದ್ಧ ಕೊನೆಗೊಳ್ಳಬೇಕು ಎಂದು ರಷ್ಯಾ ತನ್ನ ಸೇನೆಗೆ ತಾಕೀತು ಮಾಡಿದೆ ಎಂದು ತಿಳಿದುಬಂದಿದೆ.

ಯುದ್ಧ ಮುಕ್ತಾಯಗೊಳ್ಳುವ ಆ ದಿನದಂದು ರಷ್ಯಾದಲ್ಲಿ 'ನಾಜಿ ಜರ್ಮನಿ ವಿಜಯೋತ್ಸವ' ಆಚರಿಸಲಾಗುತ್ತಿದೆ. ಅಷ್ಟೊತ್ತಿಗಾಗಲೇ ಕದನ ಕೊನೆಗೊಳಿಸಬೇಕು ಎಂದು ರಷ್ಯಾ ಚಿಂತಿಸಿದೆ. ಈ ವಿಚಾರವನ್ನು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ಗುಪ್ತಚರ ಮೂಲಗಳು ಹೇಳಿವೆ. ಇದೇ ವೇಳೆ ಉಕ್ರೇನ್‌, ರಷ್ಯಾ ವಿರುದ್ಧ ಗಂಭೀರ ಆರೋಪ ಸರಣಿಯನ್ನು ಮುಂದುವರೆಸಿದೆ.

  • ⚡️Ukrainian army: Russia wants to end war by May 9.

    According to intelligence from the General Staff of the Armed Forces of Ukraine, Russian troops are being told that the war must end by May 9 – widely celebrated in Russia as the day of victory over the Nazi Germany.

    — The Kyiv Independent (@KyivIndependent) March 24, 2022 " class="align-text-top noRightClick twitterSection" data=" ">

ಏತನ್ಮಧ್ಯೆ, ರಷ್ಯಾ ಸೇನೆಯು ನಮ್ಮ ನಾಗರಿಕರನ್ನು ಬಲವಂತವಾಗಿ ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ಯುತ್ತಿದೆ. ಅವರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡು ಯುದ್ಧದಿಂದ ಹಿಂದೆ ಸರಿಯಲು ಒತ್ತಡ ಹೇರುವ ತಂತ್ರ ಇದಾಗಿದೆ. 84,000 ಮಕ್ಕಳು ಸೇರಿದಂತೆ 4 ಲಕ್ಷ ಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಎಂದು ಉಕ್ರೇನ್​ ಆರೋಪಿಸಿದೆ.

ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾ ಮೇಲೆ ಹೊಸ ನಿರ್ಬಂಧಗಳು ಮತ್ತು ಉಕ್ರೇನ್‌ಗೆ ನೆರವು ನೀಡುವುದಾಗಿ ವಾಗ್ದಾನ ಮಾಡಿವೆ. ಆದರೆ, ನಿನ್ನೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಯಾಚಿಸಿದ ಶಸ್ತ್ರಾಸ್ತ್ರ ನೆರವಿಗಿಂತ ಕಡಿಮೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಿರ್ಭೂಮ್ ಪ್ರಕರಣ: ಎಸ್​ಐಟಿ ತನಿಖೆ ರದ್ದು, ಸಿಬಿಐಗೆ ಪ್ರಕರಣ ವಹಿಸಿದ ಕೋಲ್ಕತ್ತಾ ಹೈಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.