ETV Bharat / international

ಈ ದಶಕದ ಅತ್ಯಂತ ಭೀಕರ ಭೂಕಂಪ ಕಂಡ ಟರ್ಕಿ - ಸಿರಿಯಾ: ಇಷ್ಟೊಂದು ವಿನಾಶಕ್ಕೆ ಕಾರಣಗಳೇನು? - ವಿನಾಶಕ್ಕೆ ಕಾರಣ

ಟರ್ಕಿ ಮತ್ತು ಸಿರಿಯಾದಲ್ಲಿ ಈ ದಶಕದ ಅತ್ಯಂತ ಭೀಕರ ಭೂಕಂಪ ಉಂಟಾಗಿದ್ದು, ಕ್ಷಣ - ಕ್ಷಣಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಭೀಕರ ಭೂಕಂಪಕ್ಕೆ ವಿಜ್ಞಾನಿಗಳು ಕೆಲ ಕಾರಣಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ ದುರ್ಬಲ ಕಟ್ಟಡಗಳ ನಿರ್ಮಾಣ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.

why-was-turkey-syria-quake-so-devastating
ಈ ದಶಕದ ಅತ್ಯಂತ ಭೀಕರ ಭೂಕಂಪ ಕಂಡ ಟರ್ಕಿ - ಸಿರಿಯಾ: ಇಷ್ಟೊಂದು ವಿನಾಶಕ್ಕೆ ಕಾರಣವೇನು?
author img

By

Published : Feb 7, 2023, 6:50 PM IST

ಅಂಕಾರಾ/ಡಮಾಸ್ಕಸ್: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ 7.8ರಷ್ಟು ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ ಐದು ಸಾವಿರ ಗಡಿದಾಟಿದೆ. ಟರ್ಕಿಯಲ್ಲಿ ಕನಿಷ್ಠ 3,419 ಜನರು ಮೃತಪಟ್ಟಿದ್ದರೆ, ಸಿರಿಯಾದಲ್ಲಿ 1,602ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದು ಈ ದಶಕದ ಅತ್ಯಂತ ಭೀಕರ ಭೂಕಂಪ ಎಂದೇ ವರದಿಯಾಗಿದೆ.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮಲಗಿದ್ದಲ್ಲೇ ಸಜೀವ ಸಮಾಧಿಯಾದ 640ಕ್ಕೂ ಅಧಿಕ ಜನ! ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ

ಕಠಿಣ ಹವಾಮಾನ ಪರಿಸ್ಥಿತಿಯ ಮಧ್ಯೆ ಟರ್ಕಿ ಮತ್ತು ಸಿರಿಯಾ ಎರಡೂ ಕಡೆಗಳಲ್ಲೂ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಭೂಕಂಪದ ಅವಶೇಷಗಳ ಅಡಿ ಸಿಲುಕಿರುವ ಜನರನ್ನು ಬದುಕುಳಿಸುವ ಸಲುವಾಗಿ ನಿರಂತರವಾಗಿ ರಕ್ಷಣಾ ಪಡೆಗಳು ಶ್ರಮಿಸುತ್ತಿವೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುವ ನಿಟ್ಟಿನಲ್ಲಿ 10 ಹಡಗುಗಳು ಮತ್ತು 54 ವಿಮಾನಗಳನ್ನು ಸ್ಥಳದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ರಕ್ಷಣಾ ಕಾರ್ಯಕ್ಕೆ 25 ಸಾವಿರ ಸಿಬ್ಬಂದಿ: ಪ್ರಸ್ತುತ ಪೀಡಿತ ಪ್ರದೇಶಗಳಲ್ಲಿ 25 ಸಾವಿರ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ, ಜನರ ರಕ್ಷಣಾ ಕಾರ್ಯಾಚರಣೆಗೆ ಅನೇಕ ರಾಷ್ಟ್ರಗಳು ಕೈಜೋಡಿಸಿವೆ. ಇದುವರೆಗೆ 65 ದೇಶಗಳಿಂದ 2,660ಕ್ಕೂ ಹೆಚ್ಚು ಸಿಬ್ಬಂದಿಯನ್ನು ರವಾನಿಸಲಾಗಿದೆ. ಭಾರತ, ಅಮೆರಿಕ, ಬ್ರಿಟನ್​, ರಷ್ಯಾ, ಚೀನಾ, ಜಪಾನ್, ಇರಾಕ್, ಇರಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ಗ್ರೀಸ್ ಸೇರಿದಂತೆ ಇತರ ರಾಷ್ಟ್ರಗಳು ನೆರವಿಗೆ ಬಂದಿವೆ.

ಈ ನಡುವೆ ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಮಾತನಾಡಿ, ಭೂಕಂಪದ ಸಾವು - ನೋವಿನ ವಿವರಗಳನ್ನು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಇದುವರೆಗೆ 3,419 ಮಂದಿ ಸಾವನ್ನಪ್ಪಿ, ಒಟ್ಟಾರೆ 20,534 ಜನರು ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇತ್ತ, ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (ಎಎಫ್‌ಎಡಿ)ದ ಅಧಿಕಾರಿ ಒರ್ಹಾನ್ ಟಾಟರ್ ಮಾತನಾಡಿ, ಸುಮಾರು 11,000 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿರಿಯಾ, ಟರ್ಕಿ ಭೂಕಂಪನ: ರಕ್ಷಣಾ, ವೈದ್ಯ ತಂಡದೊಂದಿಗೆ ತೆರಳಿದ ಭಾರತ

ಮತ್ತೊಂದೆಡೆ, ಸಿರಿಯಾದಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಆದರೆ, ಇಲ್ಲಿನ ಸಾವು - ನೋವಿನ ಸಂಖ್ಯೆ ಕಡಿಮೆ ಇದೆ. ಈ ದೇಶದಲ್ಲಿ 1,602 ಜನ ಸಾವಿಗೀಡಾಗಿದ್ದರೆ, ಗಾಯಗೊಂಡವರ ಸಂಖ್ಯೆ 3,649ರಷ್ಟಿದೆ. ಅಲ್ಲದೇ, ಇನ್ನೂ ನೂರಾರು ಕುಟುಂಬಗಳು ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿಕೊಂಡಿವೆ ಎಂದು ವರದಿಗಳು ತಿಳಿಸಿವೆ.

ಇದರಲ್ಲೂ ವಾಯುವ್ಯ ಸಿರಿಯಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 790ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೇ ಭೂಕಂಪದಿಂದ 210ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿವೆ. ಏತನ್ಮಧ್ಯೆ, ಟರ್ಕಿ ಮತ್ತು ಸಿರಿಯಾದಲ್ಲಿನ ಭಾರಿ ಮಳೆ ಮತ್ತು ಹಿಮದಿಂದಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ ಎಂದೂ ವರದಿಯಾಗಿವೆ.

ಈ ದಶಕದ ಅತ್ಯಂತ ಭೀಕರ ಭೂಕಂಪ: ಟರ್ಕಿ ಮತ್ತು ಸಿರಿಯಾದಲ್ಲಿನ ಸೋಮವಾರದ ಭೂಕಂಪವು ಈ ದಶಕದ ಅತ್ಯಂತ ಭೀಕರ ಭೂಕಂಪ ಎಂದೇ ಹೇಳಲಾಗುತ್ತಿದೆ. ವಿಜ್ಞಾನಿಗಳ ಪ್ರಕಾರ, ಭೂಕಂಪದ ಸಮಯ, ಸ್ಥಳ ಹಾಗೂ ದುರ್ಬಲ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಂಶಗಳಿಂದಾಗಿ ಈ ಭೂಕಂಪವು ಅಂತ್ಯಂತ ವಿನಾಶಕಾರಿಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಟರ್ಕಿ ದೇಶವು ಜಗತ್ತಿನ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. 1939ರಿಂದ ಈ ರಾಷ್ಟ್ರವು ಪ್ರಬಲ ಭೂಕಂಪಗಳನ್ನೂ ಕಾಣುತ್ತಲೇ ಇದೆ. ಆಗ ಎರ್ಜಿಂಕನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಅಂದಾಜು 30 ಸಾವಿರ ಜನರು ಬಲಿಯಾಗಿದ್ದರು. 1999ರಲ್ಲಿ ಉತ್ತರ ಅನಾಟೋಲಿಯನ್​ನಲ್ಲಿ ನಡೆದ ಭೂಕಂಪವು 17 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿತ್ತು. ಕಳೆದ 25 ವರ್ಷಗಳಲ್ಲಿ ಟರ್ಕಿಯಲ್ಲಿ 7.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಏಳು ಭೂಕಂಪಗಳು ಸಂಭವಿಸಿವೆ. ಆದರೆ, ಸೋಮವಾರದ ಬೆಳಗಿನ ಜಾವದ ಈ ಭೂಕಂಪವು ತುಂಬಾ ವಿನಾಶಕಾರಿಯಾಗಿತ್ತು.

ಇದನ್ನೂ ಓದಿ: ಟರ್ಕಿ - ಸಿರಿಯಾ ಭೂಕಂಪದಲ್ಲಿ ಮಡಿದವರಿಗೆ ಮೋದಿ ಸಂತಾಪ: ಭುಜ್ ಭೂಕಂಪ ನೆನೆದು ಭಾವುಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.