ETV Bharat / international

Russia Wagner group: ರಷ್ಯಾ ಸೇನೆ ವಿರುದ್ಧ ತಿರುಗಿಬಿದ್ದ ವ್ಯಾಗ್ನರ್​ ಪಡೆ..ಪುಟಿನ್​ ಆಪ್ತ ಯೆವ್ನಿನ್ ಪ್ರಿಗೊಜಿನ್ ಬೆದರಿಕೆಯೇನು? - ಯೆವ್ನಿನ್ ಪ್ರಿಗೊಝಿನ್

ರಷ್ಯಾ ಅಧ್ಯಕ್ಷರಿಗೇ ಗುನ್ನ ಇಡಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರಿಗೋಜಿನ್ ಯಾರು..? ವ್ಯಾಗ್ನರ್ ಗುಂಪು ಎಂದರೇನು? ಎಂಬುದರ ವಿವರ ಇಲ್ಲಿದೆ.

ರಷ್ಯಾ ಸೇನೆ ವಿರುದ್ಧ ತಿರುಗಿಬಿದ್ದ ವ್ಯಾಗ್ನರ್​ ಪಡೆ

author img

By

Published : Jun 24, 2023, 3:16 PM IST

ಮಾಸ್ಕೋ(ರಷ್ಯಾ): ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾಗೆ ಹೊಸ ತಲೆನೋವು ಶುರುವಾಗಿದೆ. ತನ್ನ ಶತ್ರುಗಳನ್ನು ಸದೆಬಡಿಯಲು ರಷ್ಯಾ ಅಧ್ಯಕ್ಷ ವ್ಲಾಡಿಮರ್​ ಪುಟಿನ್​ ರಚಿಸಿಕೊಂಡಿದ್ದ ಗೌಪ್ಯ ಸೇನೆಯಾದ ವ್ಯಾಗ್ನರ್​ ಪಡೆ ಈಗ ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದಿದೆ. ಸೇನಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಯುದ್ಧದಿಂದ ಹಿಂದಿರುಗುವುದಾಗಿ ಎಚ್ಚರಿಕೆ ನೀಡಿದೆ.

ವ್ಯಾಗ್ನರ್ ಪಡೆ ಎಂಬುದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಅಂತಲೂ ಕರೆಯುತ್ತಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರಾಗಿದ್ದ ಯೆವ್ನಿನ್ ಪ್ರಿಗೊಝಿನ್ ಎಂಬುವರು ಇದರ ಮುಖ್ಯಸ್ಥರಾಗಿದ್ದಾರೆ. ಇದೊಂದು ಕಾನೂನು ಬಾಹಿರ ಸೇನೆಯಾಗಿದ್ದರೂ, ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿತ್ತು. ಇದೀಗ ಈ ಪಡೆ ರಷ್ಯಾ ಸೇನೆಯ ವಿರುದ್ಧವೇ ಕಾಲು ಕೆದರಿ ನಿಂತಿದೆ.

ಹಲವು ವರ್ಷಗಳಿಂದ ರಷ್ಯಾದ ಪಡೆಗಳನ್ನು ಬೆಂಬಲಿಸುತ್ತಿರುವ ವ್ಯಾಗ್ನರ್ ಗುಂಪು ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ಬಂಡಾಯವೆದ್ದಿದೆ. ಪುಟಿನ್ ಅವರ ನಾಯಕತ್ವವನ್ನು ಉರುಳಿಸಲಾಗುವುದು ಎಂದು ವ್ಯಾಗ್ನರ್ ಸೈನ್ಯದ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್‌ನಲ್ಲಿ ತಮ್ಮ ಪಡೆಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವ್ಯಾಗ್ನರ್ ಎಂಬುದು ಖಾಸಗಿ ಮಿಲಿಟರಿ ಕಂಪನಿ (ಪಿಎಂಸಿ)ಯಾಗಿದೆ. ಈ ಗುಂಪು ಸಂಪೂರ್ಣವಾಗಿ ಕೂಲಿ ಕಾರ್ಮಿಕರನ್ನು ಒಳಗೊಂಡಿದೆ. ವಿದೇಶದಲ್ಲಿ ರಷ್ಯಾ ಮತ್ತು ಪುಟಿನ್ ಬಯಸಿದ ಗುರಿಗಳನ್ನು ಸಾಧಿಸಲು ಇದು ರಹಸ್ಯವಾಗಿ ಕೆಲಸ ಮಾಡುತ್ತದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪ್ರಮುಖ ನಗರವಾದ ಬಖ್ಮುತ್ ಅನ್ನು ವಶಪಡಿಸಿಕೊಳ್ಳುವಲ್ಲಿ ಈ ಸೇನೆ ಪ್ರಮುಖ ಪಾತ್ರ ವಹಿಸಿತ್ತು.

ಯಾರು ಈ ಯೆವ್ಗೆನಿ ಪ್ರಿಗೊಜಿನ್?: ರಷ್ಯಾ ಅಧ್ಯಕ್ಷ ಪುಟಿನ್ ಅವರ ರಾಜಕೀಯ ವಲಯದಲ್ಲಿ ಯೆವ್ಗೆನಿ ಪ್ರಿಗೊಜಿನ್ ಹೆಸರು ಬಹುಚಾಲಿತ. ಅವರನ್ನು 'ಪುಟಿನ್ ಬಾಣಸಿಗ' ಎಂದೇ ಕರೆಯಲಾಗುತ್ತದೆ. ಪ್ರಿಗೋಜಿನ್ ಪುಟಿನ್ ಅವರ ಆಪ್ತರಲ್ಲಿ ಒಬ್ಬರು. 1980 ರ ದಶಕದಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳಿಗಾಗಿ ಸುಮಾರು 9 ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಇಬ್ಬರೂ 1990ರಲ್ಲಿ ಭೇಟಿಯಾದರು. ಪುಟಿನ್ 2000 ರಲ್ಲಿ ರಷ್ಯಾದ ಅಧ್ಯಕ್ಷರಾದರು. ಮತ್ತೊಂದೆಡೆ, ಪ್ರಿಗೋಜಿನ್ ರೆಸ್ಟೋರೆಂಟ್‌ಗಳು ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. 2001 ರಿಂದ ಪುಟಿನ್ ಅವರ ನಿಕಟ ವಲಯಗಳಲ್ಲಿ ಪ್ರಿಗೋಜಿನ್ ಕಾಣಿಸಿಕೊಂಡರು.

ಅವರು ರಷ್ಯಾ ಸರ್ಕಾರದ ಮಿಲಿಟರಿ ಮತ್ತು ಶಾಲಾ ಆಹಾರ ಒಪ್ಪಂದಗಳನ್ನು ಪಡೆದರು. ನಂತರ 2014 ರಲ್ಲಿ ವ್ಯಾಗ್ನರ್ ಪಡೆಯ ನಿರ್ವಹಣೆ ಜವಾಬ್ದಾರಿಯನ್ನು ಪಡೆದುಕೊಂಡರು. ಕ್ರಿಮಿಯಾ ಯುದ್ಧದಲ್ಲಿ ವ್ಯಾಗ್ನರ್ ಪಡೆ ನಿರ್ಣಾಯಕ ಪಾತ್ರ ವಹಿಸಿತ್ತು. 2016 ರಲ್ಲಿ ಅಮೆರಿಕ ಪ್ರಿಗೋಜಿನ್ ಮೇಲೆ ನಿರ್ಬಂಧ ಹೇರಿತ್ತು. ಅಮೆರಿಕ ಚುನಾವಣೆಯಲ್ಲಿ ಪ್ರಿಗೋಜಿನ್ ಟ್ರಂಪ್ ಪರವಾಗಿ ಪ್ರಚಾರ ಮಾಡಿದ್ದರು ಎಂಬ ಆರೋಪಗಳಿವೆ. 'ಡೆಬಾಲ್ಟ್ಸೆವ್ ಕದನ'ದಲ್ಲಿ ಇವರ ಕೈವಾಡವೂ ಇತ್ತು. ಅಮೆರಿಕದ ಎಫ್‌ಬಿಐ ಇವರ ಮೇಲೆ 2,50,000 ಡಾಲರ್ ಬಹುಮಾನ ಘೋಷಿಸಿದೆ.

ವ್ಯಾಗ್ನರ್ ರಷ್ಯಾದ ಖಾಸಗಿ ಸೈನ್ಯವಾಗಿದೆ. ವಾಸ್ತವವಾಗಿ ಈ ಹೆಸರಿನಲ್ಲಿ ಯಾವುದೇ ಕಂಪನಿ ನೋಂದಣಿಯಾಗಿಲ್ಲ. ರಷ್ಯಾದ ಸೇನೆಯ ಮಾಜಿ ಲೆಫ್ಟಿನೆಂಟ್ ಕರ್ನಲ್ ಡಿಮಿಟ್ರಿ ಉಟ್ಕಿನ್ ಅವರು ಪ್ರಾರಂಭಿಸಿದರು. ಜರ್ಮನ್ ಒಪೆರಾ ಸಂಯೋಜಕನಾಗಿದ್ದ ವ್ಯಾಗ್ನರ್ ಹೆಸರಿನಲ್ಲಿ ಇದನ್ನು ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತದೆ. ವ್ಯಾಗ್ನರ್ ಗುಂಪು ಬಹುತೇಕ ಮಾಜಿ ಸೈನಿಕರನ್ನು ಒಳಗೊಂಡಿದೆ. ಗುಂಪಿನ ಒಬ್ಬ ಸದಸ್ಯ ಮೃತಪಟ್ಟರೆ, ಅವರ ಕುಟುಂಬಕ್ಕೆ 50 ಸಾವಿರ ಡಾಲರ್​ವರೆಗೆ ನೆರವು ನೀಡಲಾಗುತ್ತದೆ. 2017 ರಲ್ಲಿ ಇದು ಬ್ಲೂಮ್‌ಬರ್ಗ್ 6,000 ಜನರನ್ನು ಹೊಂದಿತ್ತು. ಇದನ್ನು ರಷ್ಯಾದ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳು ನಿಯಂತ್ರಿಸುತ್ತವೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ ಹೇಳಿದೆ.

ಅನೇಕ ದೇಶಗಳಲ್ಲಿ ವ್ಯಾಗ್ನರ್ ದಾಳಿ: ವ್ಯಾಗ್ನರ್ ಗ್ರೂಪ್ ಪ್ರಪಂಚದ ಅನೇಕ ದೇಶಗಳಲ್ಲಿ ದಾಳಿಗಳನ್ನು ನಡೆಸಿದೆ. ಲಿಬಿಯಾ ಅಂತರ್ಯುದ್ಧ, ಸಿರಿಯಾ, ಮೊಜಾಂಬಿಕ್, ಮಾಲಿ, ಸುಡಾನ್, ಆಫ್ರಿಕನ್ ರಿಪಬ್ಲಿಕ್ ಮತ್ತು ವೆನಿಜುವೆಲಾದಂತಹ ದೇಶಗಳಲ್ಲಿ ಇದು ಕಾರ್ಯಾಚರಣೆ ನಡೆಸಿದೆ. ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಅವರ ರಷ್ಯಾದ ಪರ ಸರ್ಕಾರವನ್ನು ರಕ್ಷಿಸಲು ವ್ಯಾಗ್ನರ್ ಗುಂಪು ರಷ್ಯಾದ ಮಿಲಿಟರಿಯೊಂದಿಗೆ ಕೆಲಸ ಮಾಡಿತ್ತು. ಉಕ್ರೇನ್‌ನಲ್ಲಿ ರಷ್ಯಾದೊಂದಿಗೆ ಹೋರಾಟ ನಡೆಸಿತ್ತು. ವಾಸ್ತವವಾಗಿ, ಖಾಸಗಿ ಸೈನ್ಯವನ್ನು ನಡೆಸುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಆದರೆ ಈ ವ್ಯಾಗ್ನರ್ ಅನೇಕ ವಿಧಗಳಲ್ಲಿ ಪ್ರಯೋಜನಕ್ಕಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ಸೆಲ್ಫಿ, ಆಟೋಗ್ರಾಫ್​ಗಾಗಿ ಸಾಲುಗಟ್ಟಿನಿಂತ ಕಾಂಗ್ರೆಸ್ಸಿಗರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.