ETV Bharat / international

ವಿಪರೀತ ಉಷ್ಣಾಂಶಕ್ಕೆ ಯುರೋಪ್​ ತತ್ತರ; ಹೆಚ್ಚಿದ ಸಾವಿನ ಸಂಖ್ಯೆ​, ತುರ್ತು ಕ್ರಮಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕರೆ

author img

By

Published : Jul 19, 2023, 11:33 AM IST

ಯುರೋಪ್​ ಎಂದರೆ ತಣ್ಣಗಿನ, ಹಸಿರು ತುಂಬಿರುವ ವಾತಾವರಣ ಎಂಬ ಕಲ್ಪನೆ ಮೂಡುತ್ತದೆ. ಆದರೆ, ಹವಾಮಾನ ಬದಲಾವಣೆಯಿಂದ ಪರಿಸ್ಥಿತಿ ಬದಲಾಗಿದೆ.

WHO calls urgent need to tackle the climate crisis

ಕೂಪನ್​ ಹೇಗನ್​: ಭಾರೀ ತಾಪಮಾನದಿಂದ ಯುರೋಪ್​ನಲ್ಲಿ ಕಳೆದ ವರ್ಷ 60 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಈ ಹವಾಮಾನ ಬಿಕ್ಕಟ್ಟನ್ನು ನಿರ್ವಹಣೆ ಮಾಡಲು ತುರ್ತು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಅಧಿಕ ತಾಪಮಾನದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯುವ ವರ್ಷದಿಂದ ವರ್ಷಕ್ಕೆ ಎಚ್ಚರಿಕೆ ಮೂಡಿಸುತ್ತಿದೆ ಎಂದು ವಿಶ್ವಸಂಸ್ಥೆ ಯುರೋಪ್​​ನ ಪ್ರಾದೇಶಿಕ ನಿರ್ದೇಶಕರಾದ ಹಾನ್ಸ್​​ ಕ್ಲೂಗೆ ತಿಳಿಸಿದ್ದಾರೆ.

ಶಾಖಕ್ಕೆ ತತ್ತರಿಸಿದ ಯುರೋಪ್​: ಪ್ರಸ್ತುತ ದಕ್ಷಿಣ ಮತ್ತು ಪೂರ್ವ ಯುರೋಪ್​ನಲ್ಲಿ ಅಪಾಯದ ವಲಯ ಇದೆ. ಜನರು ತಮ್ಮ ಹವಾಮಾನ ವರದಿಯನ್ನು ಪ್ರತಿನಿತ್ಯ ಪರಿಶೀಲಿಸಬೇಕಿದೆ. ಸ್ಥಳೀಯ ಮಾರ್ಗಸೂಚಿ ಪಾಲನೆ ಜೊತೆಗೆ ಹವಾಮಾನ ಸಂಬಂಧಿತ ಆರೋಗ್ಯ ಅಪಾಯ ಕುರಿತು ಮಾಹಿತಿ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಬೇಸಿಗೆಯಲ್ಲಿ ಹೊಸ ವಾಸ್ತವತೆಗೆ ಹೊಂದಿಕೊಳ್ಳುವುದರ ಹೊರತಾಗಿ, ನಾವು ಮುಂದಿನ ವರ್ಷಗಳು ಮತ್ತು ದಶಕಗಳ ಕುರಿತು ಚಿಂತನೆ ಮಾಡಬೇಕಿದೆ. ಹವಾಮಾನ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಾದೇಶಿಕ ಮತ್ತು ಜಾಗತಿಕವಾಗಿ ತುರ್ತು ಕ್ರಮ ವಹಿಸಬೇಕಿದೆ. ಇದು ಮಾನವ ಜನಾಂಗಕ್ಕೆ ಭಾರೀ ಅಪಾಯ ಎಂದಿದ್ದಾರೆ.

ಹವಾಮಾನ ಬದಲಾವಣೆಯಿಂದ ಆರೋಗ್ಯ ಸವಾಲುಗಳ ಮೇಲೆ ತುರ್ತು, ವ್ಯಾಪಕವಾದ ಕ್ರಮಕ್ಕೆ ಆದ್ಯತೆ ನೀಡಬೇಕಿದೆ. ಇದಕ್ಕೆ ಬುಡಾಪೆಸ್ಟ್​​ ಡಿಕ್ಲೇರೇಷನ್​ ಅಳವಡಿಸಿಕೊಳ್ಳಬೇಕಿದೆ. ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲೆ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ನಿವಾರಿಸುವ ಸಂಬಂಧ ಕ್ರಮಕ್ಕೆ ಮುಂದಾಗಬೇಕಿದೆ ಎಂದರು.

ರೆಡ್​​ ಅಲರ್ಟ್​ ಘೋಷಣೆ: ಈ ಘೋಷಣೆಯಲ್ಲಿ ಯುವ ಜನತೆಯನ್ನು ಸೇರಿಸಿಕೊಳ್ಳಬೇಕಿದೆ. ಅವರು ಈ ಪರಿಸರ ವಿಚಾರದ ಮೇಲೆ ತಲ್ಲೀನರಾಗಿದ್ದು, ಅವರು ಕೆಲವೊಮ್ಮೆ ಪರಿಹಾರ, ಐಡಿಯಾವನ್ನು ಹೊಂದಿರುತ್ತಾರೆ. ಪರಿಸರ ಬದಲಾವಣೆಯ ಕ್ರಮಗಳನ್ನು ಸರ್ಕಾರ ಅಥವಾ ರಾಜಕೀಯ ಪಕ್ಷದಿಂದ ನಿರೀಕ್ಷೆ ಮಾಡುವಂತಿಲ್ಲ. ಇದು ಪಕ್ಷಾತೀತ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ದಕ್ಷಿಣ ಯುರೋಪ್​ ದೇಶದಲ್ಲಿ ಜನರು ಬಿಸಿಲಿನ ತಾಪಮಾನಕ್ಕೆ ಹೆಚ್ಚು ತುತ್ತಾಗುತ್ತಿದ್ದು, ಇಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಸಿಸಿಲಿಯಲ್ಲಿ ತಾಪಮಾನವೂ 46.3 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದ್ದು, ಗ್ರೀಸ್​ ಮತ್ತು ಸ್ವಿಸ್​ ಅಲ್ಪಸ್​ ನಲ್ಲಿ ಬಿಲಿಸಿನಿಂದ ಜನರು ಬೇಯುತ್ತಿದ್ದಾರೆ.

ಸ್ವಿಜರ್ಲೆಂಡ್​ನಲ್ಲಿ ಕಾಡ್ಗೀಚು ಕೂಡ ಅನುಭವಿಸುತ್ತಿದೆ. ಇದಲ್ಲಿನ ಬಿಟ್ಸಚ್​​ ಗ್ರಾಮದಲ್ಲಿ ಹೊಗೆ ದಟ್ಟವಾಗಿದೆ. ಸ್ಪಾನಿಶ್​​ನ ಲಾ ಪಾಮ್​ ದ್ವೀಪದಲ್ಲೂ ಕಾಡ್ಗಿಚ್ಚಿನಿಂದ 20 ಮನೆ ಹಾನಿಯಾಗಿದೆ. ಇಟಲಿ, ಸ್ಪೇನ್​, ಗ್ರೀಸ್​ ಮತ್ತು ಬಲ್ಕನ್ಸ್​ನ ಕೆಲವು ಪ್ರದೇಶದಲ್ಲಿ ಅಧಿಕ ತಾಪಮಾನದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನಲೆ ಜನರಿಗೆ ರೆಡ್​ ಆಲರ್ಟ್​​ ಅನ್ನು ಘೋಷಿಸಲಾಗಿದೆ.

ಯುರೋಪ್​ನಲ್ಲಿ 2021ರಲ್ಲಿ ಅಧಿಕ ತಾಪಮಾನ ಅಂದರೆ 48.8 ಡಿಗ್ರಿ ಉಷ್ಣಾಂಶವೂ ಸಿಸಿಲೆಯ ಪಲೆರ್ಮೊ ಪ್ರದೇಶದಲ್ಲಿ ದಾಖಲಾಗಿತ್ತು.

ಇದನ್ನೂ ಓದಿ: Global Temperature: ಹೆಚ್ತಿದೆ ಜಾಗತಿಕ ಉಷ್ಣಾಂಶ; ನಿರ್ವಹಣೆಗೆ ಬೇಕಿದೆ ತುರ್ತು ಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.